ರಾಜ್ಯ ಸುದ್ದಿ

ರೈಲ್ವೇ ಇಲಾಖೆಗೆ ಹೊಸ ದಿಕ್ಕು ತೋರಿಸಿದ್ದ ಸಿ.ಕೆ. ಜಾಫರ್ ಶರೀಫ್

ಬೆಂಗಳೂರು: ರೈಲ್ವೇ ಎಂದರೆ ಜಾಫರ್ ಶರೀಫ್, ಜಾಫರ್ ಎಂದರೆ ರೈಲ್ವೆ ಎಂಬುವಷ್ಟರ ಮಟ್ಟಿದೆ ಜಾಫರ್ ಶರೀಫ್ ಅವರು ರೈಲ್ವೆ ಖಾತೆಯೊಂದಿಗೆ ಗುರ್ತಿಸಿಕೊಂಡಿದ್ದರು. ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ಜಾಫರ್ ಶರೀಫ್ ಅವರು 2 ವರ್ಷಗಳ ಕಾಲ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಹಾಗೂ ಪಿ.ವಿ.ನರಸಿಂಹ ರಾವ್ ಸಚಿವ ಸಂಪುಟದಲ್ಲಿ 5 ವರ್ಷಗಳ ರೈಲ್ವೇ ಸಚಿವರಾಗಿ ದೇಶದ ರೈಲ್ವೇ ಇಲಾಖೆಗೆ ಹೊಸ ದಿಕ್ಕು ತೋರಿಸಿದ್ದರು. ರೈಲ್ವೇ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದ ಶರೀಫ್ ಅವರು, ಮೀಟರ್ ಗೇಜ್, ನ್ಯಾರೋಗೇಜ್ ಹಳಿಗಳನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವ ಯೂನಿಗೇಜ್ ನೀತಿ ಜಾರಿಗೊಳಿಸಿ ದೇಶದ್ಯಂತ ರೈಲ್ವೆ ಸೇವೆಯಲ್ಲಿ ಮಹತ್ವದ ಬೆಳವಣಿಗೆಗೆ ಕಾರಣರಾಗಿದ್ದರು. 1980ರಿಂದ 1984ರವರೆಗೂ ರಾಜ್ಯದ ರೈಲ್ವೇ ಸಚಿವರಾಗಿದ್ದ ಶರೀಫ್ ಅವರು ರಾಜ್ಯದ ರೈಲ್ವೇ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ತಮ್ಮ ಅವಧಿಯಲ್ಲಿ ಬೆಂಗಳೂರು ರೈಲ್ವೇ ವಿಭಾಗದ ಅಭಿವೃದ್ಧಿ, ಬೆಂಗಳೂರಿನಲ್ಲಿ ನೇಮಕಾತಿ ಮಂಡಳಿ ಸ್ಥಾಪನೆ, ಚಿತ್ರದುರ್ಗ-ರಾಯದುರ್ಗ ರೈಲ್ವೇ ಮಾರ್ಗ ನಿರ್ಮಾಣ, ಯಲಹಂಕದ ವೀಲ್ ಮತ್ತು ಆಕ್ಸೆಲ್ ಪ್ಯಾಂಟ್ ಅಭಿವೃದ್ಧಿ, ಕೋಲಾರದ ರೈಲ್ವೇ ಕೋಚ್ ತಯಾರಿಕಾ ಕಾರ್ಖಾನೆಗೆ ಮೂಲ ಸೌಕರ್ಯ, ವೈಟ್ ಫೀಲ್ಡ್ ನಲ್ಲಿ ಅಂತರಾಷ್ಟ್ರೀಯ ಕಂಟೇನರ್ ಡಿಪೋ, ಗೂಡ್ಸ್ ಟರ್ಮಿನಲ್ ಸ್ಥಾಪನೆ, ಕೆ.ಆರ್ ಪುರಂ ನಲ್ಲಿ ಡೀಸೆಲ್ ಲೋಕೊ ಶೆಟ್ ಕಾಮಗಾರಿಗೆ ಕಾರಣರಾಗಿದ್ದರು.
ಶರೀಫ್ ಅವರ ಅವಧಿಯಲ್ಲಿ ರಾಜ್ಯದ ಹಲವು ರೈಲ್ವೇ ಮಾರ್ಗಗಳು ಬ್ಡಾರ್ ಗೇಜ್ ಗಳಾಗಿ ಪರಿವರ್ತನೆಗೊಂಡಿದ್ದವು. ಇದಕ್ಕೆ ಸಾಕಷ್ಟು ಶ್ಲಾಘನೆಗಳೂ ಕೂಡ ವ್ಯಕ್ತವಾಗಿದ್ದವು. ಶರೀಫ್ ಕುರಿತಂತೆ ಮಾತನಾಡಿರುವ ರೈಲ್ವೇ ಅಧಿಕಾರಿಗಳು, ಭಾರತೀಯ ರೈಲ್ವೇಗೆ ಏಕ-ಗೇಜ್ ವ್ಯವಸ್ಥೆ ರೂಪಿಸುವ ದೃಷ್ಟಿಕೋನವನ್ನು ಹೊಂದಿದ್ದಕ್ಕೆ ಇಡೀ ದೇಶ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಮೀಟರ್ ಗೇಜ್, ನ್ಯಾರೋಗೇಜ್ ಹಳಿಗಳನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವ ಯೂನಿಗೇಜ್ ನೀತಿಯನ್ನು ಶರೀಫ್ ಜಾರಿಗೊಳಿಸಿದ್ದರು. ಈ ನೀತಿ ಎಲ್ಲಾ ರಾಜ್ಯಗಳಲ್ಲಿ ಆರ್ಥಿಕ ಏಕೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment