ಅ೦ತರಾಷ್ಟ್ರೀಯ

ಲಂಕಾ ಸಂಸತ್ ಅಮಾನತು ಆದೇಶ ಹಿಂಪಡೆದ ಅಧ್ಯಕ್ಷ ಸಿರಿಸೇನಾ

ಕೊಲಂಬೋ: ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸಂಸತ್‌ ಅಮಾನತು ಆದೇಶವನ್ನು ಹಿಂಪಡೆದಿದ್ದು, ನ.5ರಂದು ಅಧಿವೇಶನ ಕರೆದಿದ್ದಾರೆ. ದೇಶದಲ್ಲಿ ಉದ್ಭವಿಸಿರುವ ಸಾಂವಿಧಾನಿಕ ಬಿಕ್ಕಟ್ಟಿನ ಕುರಿತು ಸಿರಿಸೇನಾ ಮತ್ತು ಸಂಸತ್‌ ಸ್ಪೀಕರ್‌ ಕರು ಜಯಸೂರ್ಯ ಬುಧವಾರ ಚರ್ಚೆ ನಡೆಸಿದರು. ಅಂತಿಮವಾಗಿ ಅಮಾನತು ಆದೇಶ ಹಿಂಪಡೆಯಲು ಸಿರಿಸೇನಾ ಒಪ್ಪಿಕೊಂಡರು.

ಕಳೆದ ವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆ  ಅವರನ್ನು ನೇಮಕ ಮಾಡಿದ್ದರು. ಮರುದಿನ ಸಂಸತ್‌ನಲ್ಲಿ ತಮಗೇ ಬಹುಮತವಿದೆ ಎಂದು ವಿಕ್ರಮಸಿಂಘೆ ಘೋಷಿಸಿಕೊಂಡ ಕೆಲವೇ ಕ್ಷಣಗಳಲ್ಲಿ ನವೆಂಬರ್‌ 16ರವರೆಗೆ ಸಂಸತ್‌ ಅನ್ನೇ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಿದ್ದರು. ಈ ಕ್ರಮ ಜಾಗತಿಕ ಮಟ್ಟದಲ್ಲಿಯೂ ತೀವ್ರ ಟೀಕೆ ಎದುರಿಸಿತ್ತು.

About the author

ಕನ್ನಡ ಟುಡೆ

Leave a Comment