ರಾಷ್ಟ್ರ

ಲಾತೇಹಾರ್‌: ಭದ್ರತಾ ಪಡೆಗಳ ಎನ್‌ಕೌಂಟರ್‌; 5 ಮಾವೋ ಉಗ್ರರ ಹತ್ಯೆ

ಲಾತೇಹಾರ್‌ : ಜಾರ್ಖಂಡ್‌ನ‌ ಲಾತೇಹಾರ್‌ ಜಿಲ್ಲೆಯ ಸೆರೆನ್‌ದಾಗ್‌ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಐವರು ಮಾವೋ ಉಗ್ರರು ಹತರಾಗಿರುವುದಾಗಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಮತ್ತು ಸಿಆರ್‌ಪಿಎಫ್ ಸಿಬಂದಿಗಳನ್ನು ಒಳಗೊಂಡ ಜಂಟಿ ತಂಡದ ಎನ್‌ಕೌಂಟರ್‌ ಕಾರ್ಯಾಚರಣೆ ಈಗಲೂ ಅರಣ್ಯ ಪ್ರದೇಶದಲ್ಲಿ ಮುಂದುವರಿದಿದೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಪ್ರಶಾಂತ್‌ ಆನಂದ್‌ ತಿಳಿಸಿದ್ದಾರೆ. ಎನ್‌ಕೌಂಟರ್‌ ನಡೆದ ತಾಣದಲ್ಲಿ ಬಿದ್ದಿದ್ದ ಐವರು ಮಾವೋ ಉಗ್ರರ ಶವಗಳನ್ನು ಮತ್ತು ಮೂರು ಎಕೆ 47 ರೈಫ‌ಲ್‌ಗ‌ಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ ಎಂದವರು ಹೇಳಿದರು.

 

About the author

ಕನ್ನಡ ಟುಡೆ

Leave a Comment