ಸುದ್ದಿ

ಲಿಂಗಸುಗೂರಿನಲ್ಲಿ ‌ವಿಧ್ಯಾರ್ಥಿಗಳ ಕುರಿತು ಮಾತನಾಡಿದ ಬೆಂಗಳೂರಿನ ಅಲಸೂರು ರಾಮಕೃಷ್ಣ ಆಶ್ರಮದ ಶ್ರೀ ತ್ಯಾಗೀಶ್ವರಾನಂದ ಜೀ ಮಹಾರಾಜ

ರಾಯಚೂರು: ಲಿಂಗಸುಗೂರಿನ ಉಮಾಮಹೇಶ್ವರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಯುವ ಜನತೆಗಾಗಿ ವಿವೇಕಾನಂದರು ವಿಚಾರ ಸಂಕಿರಣ ಜರುಗಿತು.
ಕಾರ್ಯಕ್ರಮವನ್ನು ಸ್ವಾಮಿವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆರಂಭಿಸಿದರು.

ವಿದ್ಯಾರ್ಥಿಗಳ ಕುರಿತು ಬೆಂಗಳೂರಿನ ಅಲಸೂರು ರಾಮಕೃಷ್ಣ ಆಶ್ರಮ ಮಠದ ಶ್ರೀ ತ್ಯಾಗೀಶ್ವರಾನಂದಜೀ ಮಹಾರಾಜ ಅವರು ಮಾತನಾಡಿ ಸ್ವಾಮಿವಿವೇಕಾನಂದರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಜನ್ಮಕೊಟ್ಟ ತಂದೆತಾಯಿಗೆ ಒಳ್ಳೆಯ ಹೆಸರು ಜೊತೆಗೆ ಈ ಸಮಾಜಕ್ಕೆ ಕೊಡುಗೆ ಕೊಡುವಂತಾಗಬೇಕು.

ನಿಮ್ಮ ಗುರಿ ಮತ್ತು ಉದ್ದೇಶಗಳು ಈ ರಾಷ್ಟ್ರದ ಏಳ್ಗೆಗೆ ಸಹಕಾರಿಯಾಗಿರಬೇಕು. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಯುವಶಕ್ತಿಗೆ ಮಾತ್ರ ಸಾಧ್ಯ ಎಂದರು.

ಸ್ವಾಮಿವಿವೇಕಾನಂದ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ವೀರನಗೌಡ ಮಾಲಿಪಾಟೀಲ ಐದನಾಳ ಮಾತಾಡಿ ಲಿಂಗಸುಗೂರಿನಲ್ಲಿ ಸ್ವಾಮಿ ವಿವೇಕಾನಂದರ ಗ್ರಂಥಾಲಯ, ಶಿಕ್ಷಣ ಕೇಂದ್ರ ಶಾಖೆ ಆರಂಭಿಸಲು ಸೂಕ್ತ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿನಯ ಕುಮಾರ ಗಣಾಚಾರಿ,ಪ್ರಾಂಶುಪಾಲ ಜಿ.ವಿ ಸುರೇಶ್, ಅಧ್ಯಾಪಕ ಹನುಮೇಶ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಸೇರಿದ್ದರು.

About the author

ಕನ್ನಡ ಟುಡೆ

Leave a Comment