ರಾಜ್ಯ ಸುದ್ದಿ

ಲಿಂಗಸುಗೂರು: ಡಿಡಿಪಿಐ ಪ್ರಯತ್ನದಿಂದಾಗಿ ಮುಚ್ಚಿದ್ದ ಶಾಲೆ ಪುನಾರಂಭ

ಮಲಾಪುರ ಕ್ಯಾಂಪ್(ಲಿಂಗಸುಗೂರು): ರಾಯಚೂರು ಜಿಲ್ಲೆಯ ರಿಮೋಟ್ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯೊಂದು ಶಿಕ್ಷಣ ಅಧಿಕಾರಿಯ ಪ್ರಯತ್ನದಿಂದಾಗಿ ಚಟುವಟಿಕೆಯಿಂದ ಕೂಡಿದೆ.
ಆಗಸ್ಟ್ ನಲ್ಲಿ ಮುಚ್ಚಿದ ಶಾಲೆ, ಡಿಸೆಂಬರ್ 18 ರಂದು ಪುನಾರಾರಂಭವಾಗಿದೆ, ಮಕ್ಕಳಿಗೆ ಪಾಠ ಪ್ರವಚನ ಆರಂಭವಾಗಿದೆ. ಮಲಾಪುರ ಸರ್ಕಾರಿ ಶಾಲೆಯ ಡಿಡಿಪಿಐ ಬಿ.ಕೆ ನಂದನೂರ್ ಶಾಲೆಯನ್ನು ಪುನಾರಂಭ ಮಾಡುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದರು. ಶಾಲೆಯ ಶಿಕ್ಷಕರೊಬ್ಬರು ಅಮಾನತುಗೊಂಡ ನಂತರ ಮಕ್ಕಳು ಶಾಲೆಯಿಂದ ಹೊರ ಬಿದ್ದರು,
ಈ ವೇಳೆ ಅಲ್ಲಿನ ನಿವಾಸಿಗಳು ಡಿಡಿಪಿಐ ಅವರನ್ನು ಮನವಿ ಮಾಡಿ ಶಾಲೆಯನ್ನು ಮತ್ತೆ ಪುನಾರಾರಂಭ ಗೊಳಿಸುವಂತೆ ಕೋರಿದ್ದರು. ಹೊಸ ಶಿಕ್ಷಕರನ್ನು ಶಾಲೆಗೆ ನೇಮಿಸುವಂತೆ ಮನವಿ ಮಾಡಿದ್ದರು, ದಾಖಲಾತಿ ಪಟ್ಟಿ ನೋಡಿ ಅಲ್ಲಿನ ಎಲ್ಲಾ ನಿವಾಸಿಗಳ ಮನೆಗೆ ತೆರಳಿ ಮಕ್ಕಳನ್ನು ವಾಪಸ್ ಶಾಲೆಗೆ ಬರುವಂತೆ ಮನವೊಲಿಸಿದ್ದರು, ಆ ನಂತರ ಎಲ್ಲಾ ಮಕ್ಕಳು ಶಾಲೆಗೆ ವಾಪಾಸಾಗುತ್ತಿದ್ದಾರೆ, ಜಿಲ್ಲೆಯಲ್ಲಿ ಯಾವೊಂದು ಶಾಲೆಯ ಮುಚ್ಚಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment