ರಾಜಕೀಯ

ಲಿಂಗಸೂಗೂರು ಕ್ಷೇತ್ರಕ್ಕೆ ನಾನೇ ಜೆಡಿಎಸ್‌ ಅಭ್ಯರ್ಥಿ: ಆಲ್ಕೋಡ

ರಾಯಚೂರು: 2018ರ ಸಾರ್ವತ್ರಿಕ ಚುನಾವಣೆಗಾಗಿ ಜೆಡಿಎಸ್‌ ಪಕ್ಷದ ಪಟ್ಟಿ ಬಿಡುಗಡೆಯಾಗಿದೆ. ಲಿಂಗಸೂಗರು ಮತ್ತು ದೇವದುರ್ಗ ತಾಲೂಕಿನಿಂದ ಬೇರೆ ಹೆಸರುಗಳು ಪ್ರಕಟವಾಗಿವೆ. ಆದರೆ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಜೆಡಿಎಸ್‌ ಅಭ್ಯರ್ಥಿ ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ವರಿಷ್ಠರು ಈಗಾಗಲೇ ಈ ಕುರಿತು ಪ್ರತಿಕಾ ಹೇಳಿಕೆ ನೀಡಿ ಈಗಿರುವ ಪಟ್ಟಿಯಲ್ಲಿರುವ
ಹೆಸೆರುಗಳನ್ನು ಬದಲಾವಣೆ ಮಾಡುವ ಭರವಸೆ ನೀಡಿದ್ದಾರೆ. ಅದರಂತೆ ಲಿಂಗಸೂಗೂರು ಮತ್ತು ದೇವದುರ್ಗ ಕ್ಷೇತ್ರದಲ್ಲಿ
ಕರೆಮ್ಮ ನಾಯಕ ಸೇರಿದಂತೆ ನಾವೇ ಇಬ್ಬರು ಜೆಡಿಎಸ್‌ ಅಭ್ಯರ್ಥಿಗಳಾಗುತ್ತೇವೆ. ನೂತನವಾಗಿ ಪಕ್ಷ ಸೇರಿದ ಸಿದ್ದು
ಬಂಡಿಯವರು ಲಿಂಗಸೂಗೂರು ತಾಲೂಕಿನಲ್ಲಿ ಅಪಪ್ರಚಾರ ಮಾಡುತ್ತಿದ್ದು, ದೇವದುರ್ಗದಲ್ಲಿ ವೆಂಕಟೇಶ ಪೂಜಾರಿ ಅದೇ ದಾಟಿಯಲ್ಲಿ ಸಾಗಿದ್ದಾರೆ. ಹನುಮಂತಪ್ಪ ಆಲ್ಕೋಡ ಅವರಿಗೆ ಎಲ್ಲಾ ಮುಟ್ಟಿದೆ ಎಂದು ಹೇಳುತ್ತಿದ್ದು, ಯಾರಿಗೆ ಎಷ್ಟು ಮುಟ್ಟಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದರು.

About the author

ಕನ್ನಡ ಟುಡೆ

Leave a Comment