ರಾಜಕೀಯ

ಲಿಂಗಾಯತ ಮತ್ತು ಪಕ್ಷಕ್ಕೆ ಸಂಬಂಧವಿಲ್ಲ: ಹೊರಟ್ಟಿ

ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ನನ್ನ ವೈಯಕ್ತಿಕ ವಿಚಾರ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮ ಹೋರಾಟದಿಂದ ರಾಜಕೀಯ ಲಾಭ ಮಾಡಿಕೊಳ್ಳುವುದಿಲ್ಲ. ಜನ ಬುದ್ಧಿವಂತರಿದ್ದು ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಅಮಿತ್ ಷಾ ಶಿವಯೋಗಿ ಮಂದಿರಕ್ಕೆ ಹೋಗಿ ಪವಿತ್ರ ಕ್ಷೇತ್ರವನ್ನು ಹಾಳು ಮಾಡಿದ್ದಾರೆ. ಶಿವಯೋಗಿ ಮಂದಿರದಲ್ಲಿ ರಾಜಕೀಯ ಮಾಡಿದ್ದು ತಪ್ಪು . ದಿಂಗಾಲೇಶ್ವರ ಸ್ವಾಮಿ ಮಾತು ನಂಬುವಂಥದ್ದಲ್ಲ. ಲಿಂಗಾಯತ ಧರ್ಮವನ್ನು ರಾಜಕೀಯಕ್ಕೆ ಬಳಸುವುದು ತಪ್ಪು. ವಿನಯ ಕುಲಕರ್ಣಿ ಅವರು ಲಿಂಗಾಯತರ ವಿಷಯದಲ್ಲಿ ರಾಜಕೀಯ ಮಾಡಿದರೂ ತಪ್ಪು. ಸಿದ್ದರಾಮಯ್ಯ ಅವರ ಋಣ ಲಿಂಗಾಯತರ ಮೇಲೆ ಇಲ್ಲ ಎಂದರು.

About the author

ಕನ್ನಡ ಟುಡೆ

Leave a Comment