ರಾಜ್ಯ

ಲಿಂಗ ಪರಿವರ್ತಿತ ವ್ಯಕ್ತಿಯ ದಾಖಲೆ ಬದಲಿಸಿ: ಹೈಕೋರ್ಟ್ ಆದೇಶ

ಶಸ್ತ್ರ ಚಿಕಿತ್ಸೆಯ ಮೂಲಕ ಮಹಿಳೆಯಾಗಿ ಲಿಂಗಪರಿವರ್ತಿಸಿಕೊಂಡಿರು ವ್ಯಕ್ತಿಯೊಬ್ಬರಿಗೆ ಶೈಕ್ಷಣಿಕ ದಾಖಲೆಗಳಲ್ಲಿ ಹೆಣ್ಣು ಎಂದು ತಿದ್ದಲು ಸಂಬಂಧಪಟ್ಟ ಪ್ರಾಧಿಕಾರಿಗಳು ಮೂರು ತಿಂಗಳಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಪುರುಷನಾಗಿದ್ದ ನಾನು ಮಹಿಳೆಯಾಗಿ ಲಿಂಗ ಪರಿವರ್ತಿಸಿಕೊಂಡಿದ್ದು, ನನ್ನ ಶೈಕ್ಷಣಿಕ ದಾಖಲೆಗಳಲ್ಲಿ ಹೆಸರು ಹಾಗೂ ಲಿಂಗ ಬದಲಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿನೀತ್ ಕೊಠಾರಿ ಅವರಿದ್ದ ಪೀಠ, ಕುರಿತಂತೆ, ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ, ಪಿ.ಯು. ಮಂಡಳಿ, ಮಂಗಳೂರು ವಿವಿ ಮತ್ತು ಕುವೆಂಪು ವಿವಿಯ ದೂರ ಶಿಕ್ಷಣ ವಿಭಾಗದ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿತು.

About the author

ಕನ್ನಡ ಟುಡೆ

Leave a Comment