ರಾಜಕೀಯ

ಲೈಂಗಿಕ ಕಿರುಕುಳ ಆರೋಪ; ಸಂಸದ ಪ್ರತಾಪ್ ಸಿಂಹ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಮೈಸೂರು: ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಮೈಸೂರು-ಕೊಡಗು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಪ್ರತಾಪ್ ಸಿಂಹ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿಯೋರ್ವಳು ಆರೋಪಿಸಿದ್ದು, ಈ ಬಗ್ಗೆ ಪ್ರತಾಪ್ ಸಿಂಹ ಅವರದ್ದು ಎನ್ನಲಾದ ವಾಟ್ಸ್ ಆ್ಯಪ್ ಚಾಟ್, ಆಡಿಯೊ ವೈರಲ್ ಆಗಿದೆ. ಈ ಸಂಬಂಧ ಇದೀಗ ರಾಜ್ಯ ಮಹಿಳಾ ಆಯೋಗದಲ್ಲಿ ಯುವತಿ ದೂರು ಸಲ್ಲಿಕೆ ಮಾಡಿದ್ದಾಳೆ ಎಂದು ಹೇಳಲಾಗಿದೆ. ‘ಪ್ರತಾಪ್ ಸಿಂಹ ನನ್ನನ್ನು ಸೇರಿದಂತೆ ಅನೇಕ ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಈತ ಒಳ್ಳೆಯವನ ರೀತಿ ನಟಿಸಿ ನಂತರ ಆತನ ಆಸೆ ಪೂರೈಸಿಕೊಂಡು ಕೈ ಬಿಡುತ್ತಾನೆ. ನನಗೆ ಸ್ನೇಹಿತನ ರೀತಿ ಪರಿಚಯವಾದ ವ್ಯಕ್ತಿ ನಂತರ ಬಣ್ಣ ಬಣ್ಣದ ಮಾತುಗಳನ್ನು ಆಡಿ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ತಡರಾತ್ರಿಯಲ್ಲಿ ಫೋನ್ ಮಾಡುವುದು, ಕೆಟ್ಟದಾಗಿ ಮಾತನಾಡುವುದು ಮತ್ತು ಯುವತಿಯರ ದೇಹ ಸೌಂದರ್ಯವನ್ನು ವರ್ಣನೆ ಮಾಡುವುದು ಸೇರಿದಂತೆ ಅನೇಕ ರೀತಿಯಲ್ಲಿ ತೊಂದರೆ ನೀಡುತ್ತಿದ್ದ, ಇದರಿಂದ ಸಾಕಷ್ಟು ಬಾರಿ ನಾನು ಬೈದಿದ್ದೇನೆ’ ಎಂದು ಯುವತಿ ದೂರಿದ್ದಾಳೆ ಎಂದು ಹೇಳಲಾಗಿದೆ. ಯುವತಿ ಮತ್ತು ಪ್ರತಾಪ್ ಸಿಂಹ ಜೊತೆಗಿರುವುದು ಎನ್ನಲಾದ ಫೋಟೊಗಳು ಮತ್ತು ಅವರಿಬ್ಬರ ನಡುವಿನ ಫೋನ್ ಸಂಭಾಷಣೆಗಳದ್ದು ಎನ್ನಲಾದ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

About the author

ಕನ್ನಡ ಟುಡೆ

Leave a Comment