ಸಿನಿ ಸಮಾಚಾರ

ಲೈಂಗಿಕ ದೌರ್ಜನ್ಯ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ ಐಶ್ವರ್ಯಾ ರೈ

ನವದೆಹಲಿ: ಲೈಂಗಿಕ ದೌರ್ಜನ್ಯದ ವಿರುದ್ಧ ಮಿ ಟೂ ಎಂಬ ಅಭಿಯಾನವೊಂದು ಕಳೆದ ವರ್ಷದಿಂದ ಆರಂಭವಾಗಿ ಚಿತ್ರ ಜಗತ್ತನಲ್ಲೇ ಸಾಕಷ್ಟು ಚರ್ಚೆ ಉಂಟುಮಾಡಿತ್ತು. ಇದೇ ವೇದಿಕೆ ಮೂಲಕ  ಅನೇಕ ನಟಿಯರು ತಮಗೆ ಚಿತ್ರರಂಗದಲ್ಲಿ ಎದುರಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಇದೀಗ ವಿಶ್ವ ಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಂಡೆ ಟೆಲಿಗ್ರಾಫ್ ಗೆ ಮಾತನಾಡಿದ ಐಶ್ವರ್ಯಾ ಮಿ ಟೂ ಅಭಿಯಾನ ಎನ್ನುವುದು ಹಲವು ವಿಷಯಗಳ ಹಂಚಿಕೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯದು. ಜಗತ್ತಿನಲ್ಲಿ ಒಂದು ಭಾಗಕ್ಕೆ ಈ ವಿಷಯ ಸೀಮಿತವಾಗಬಾರದು. ಇದು ಖಂಡಿತಾ ಉತ್ತಮ ನಡೆ ಮುಂದುವರಿಯಬೇಕು. ಇದು ಕೇವಲ ಮನರಂಜನಾ ಮತ್ತು ವ್ಯಾಪಾರ ಉದ್ಯಮ ಕ್ಷೇತ್ರಗಳಿಗೆ ಸೀಮಿತವಾಗಬಾರದು.

ಯಾವುದೇ ಮಹಿಳೆಗೆ ಲೈಂಗಿಕ ದೌರ್ಜನ್ಯಗಳಂತಹ ಅನುಭವಗಳಾದಾಗ ಅದನ್ನು ಹೇಳಿಕೊಳ್ಳಲು ಸಾಕಷ್ಟು ಮುಜುಗರ ಅನುಭವಿಸಬೇಕಾಗುತ್ತದೆ. ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯಾಗಿದೆ.   ಇದರಲ್ಲಿ ಯಾವುದೇ ರೀತಿಯಾದ ನಿರ್ಬಂಧಗಳು ಇಲ್ಲ ಜೀವನದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಮುಕ್ತ ವೇದಿಕೆ ಎಂದು ಐಶ್ವರ್ಯ ಹೇಳಿದ್ದಾರೆ.

 

 

About the author

ಕನ್ನಡ ಟುಡೆ

Leave a Comment