ರಾಜಕೀಯ

ಲೋಕಸಭೆಗೆ ಸೀಟು ಹಂಚಿಕೆಯನ್ನು ಜನವರಿಯೊಳಗೆ ಮುಗಿಸಿ: ಕಾಂಗ್ರೆಸ್ ಗೆ ದೇವೇಗೌಡರ ತಾಕೀತು

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳ ನಡುವೆ ಹೊಂದಾಣಿಕೆ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತಿರುವುದರ ಮಧ್ಯೆ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಹಂಚಿಕೆ ಈ ತಿಂಗಳೊಳಗೆ ಇತ್ಯರ್ಥವಾಗಬೇಕೆಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಕಾಂಗ್ರೆಸ್ ಗೆ ಷರತ್ತು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳ ಒಡಂಬಡಿಕೆಯಂತೆ 1/3ರ ಅನುಪಾತದಲ್ಲಿ ಲೋಕಸಭೆಗೆ ಕ್ಷೇತ್ರಗಳನ್ನು ಹಂಚಿಕೆ ಮಾಡಿದರೆ ಜೆಡಿಎಸ್ ಗೆ ಕರ್ನಾಟದಲ್ಲಿ ಒಟ್ಟು 28 ಲೋಕಸಭೆ ಕ್ಷೇತ್ರಗಳ ಪೈಕಿ 10-11 ಕ್ಷೇತ್ರಗಳು ಲಭ್ಯವಾಗಲಿದೆ. ಆದರೆ ಇಂಥ ಕ್ಷೇತ್ರಗಳೇ ತನಗೆ ಬೇಕೆಂದು ಜೆಡಿಎಸ್ ಸದ್ಯಕ್ಕೆ  ಅದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಹಂಚಿಕೆಯಲ್ಲಿ ಕೂಡ ಅನ್ವಯವಾಗಲಿದೆ. ಈ ಬಗ್ಗೆ ಈ ತಿಂಗಳೇ ತೀರ್ಮಾನ ಮಾಡಲಾಗುವುದು ಎಂದು ದೇವೇಗೌಡರು ನಿನ್ನೆ ದೆಹಲಿಯಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಕುರಿತು ಕಾಂಗ್ರೆಸ್-ಜೆಡಿಎಸ್ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ. ಅದನ್ನು ಮೈತ್ರಿಕೂಟಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಬೇಡಿಕೆ ಇಟ್ಟಂತಿಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸರ್ಕಾರ ರಚಿಸಲು ಕಾಂಗ್ರೆಸ್ ನಮಗೆ ಷರತ್ತು ರಹಿತ ಬೆಂಬಲ ನೀಡಿದೆ. ನಮ್ಮಲ್ಲಿ 1/3ರ ಅನುಪಾತದಲ್ಲಿ ಒಡಂಬಡಿಕೆಯಾಗಿದ್ದುಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ ಬಳಿಕ ದೇವೇಗೌಡರಿಂದ ಈ ಪ್ರತಿಕ್ರಿಯೆ ಬಂದಿದೆ.ಇನ್ನು ನಿನ್ನೆ ಮಾತನಾಡುವಾಗ ಸಿದ್ದರಾಮಯ್ಯನವರನ್ನು ಬೆಂಬಲಿಸಿದ ದೇವೇಗೌಡರು, ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹೊಂಚುಹಾಕುತ್ತಿದೆ. ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಕೈ ಹಾಕುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳುವುದರಲ್ಲಿ ಅರ್ಥವಿದೆ. ಆದರೆ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment