ಸಿನಿ ಸಮಾಚಾರ

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವದಂತಿ ತಳ್ಳಿಹಾಕಿದ ಸಂಜಯ್ ದತ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ  ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಲಿವುಡ್ ಬಾಬಾ ಅಲಿಯಾಸ್ ಸಂಜಯ್ ದತ್ ಅವರು ತಮ್ಮ ತಂದೆ ನಟ, ಕಾಂಗ್ರೆಸ್ ಸಂಸದರಾಗಿದ್ದ ದಿ. ಸುನಿಲ್ ದತ್ ಅವರ ಹಾದಿ ತುಳಿಯಲಿದ್ದು, ಘಾಜಿಯಾಬಾದ್ ನಿಂದ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ನಾನು ಚುನವಾಣೆಗೆ ಸ್ಪರ್ಧಿಸುವುದು ಕೇವಲ ವದಂತಿ. ಅದು ಸತ್ಯವಲ್ಲ. ಚುನಾವಣೆಗೆ ಸ್ಪರ್ಧಿಸುತ್ತಿರುವ ನನ್ನ ಸಹೋದರಿ, ಕಾಂಗ್ರೆಸ್ ಸಂಸದೆ ಪ್ರಿಯಾ ದತ್ ಅವರಿಗೆ ನನ್ನ ಬೆಂಬಲವಿದೆ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಬೇಕು ಎಂದು ದತ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment