ರಾಜಕೀಯ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ರಾಜ್ಯದ ಸಚಿವರ ಮೊರೆ ಹೋದ ಕಾಂಗ್ರೆಸ್

ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ, ಆದರೆ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ತಯಾರಿಗಳು ಭರದಿಂದ ಸಾಗಿದೆ. ಸದ್ಯ ಬಿಜೆಪಿ ಸಂಸದರು ಪ್ರಬಲವಾಗಿರುವ ಕೆಲ ಕ್ಷೇತ್ರಗಳಲ್ಲಿ ಕೆಲವು ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು  ಚುನಾವಣಾ ಕಣಕ್ಕಿಳಿಸುವ ಆಲೋಚನೆ ಇದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಪಕ್ಷದ ಹೈಕಮಾಂಡ್ ಒಪ್ಪಿಗೆಯನ್ನು ಕೇಳಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ರಾಜ್ಯದಲ್ಲಿ ಬಿಜೆಪಿ  10 ರಿಂದ 12 ಸ್ಥಾನಗಳಿಗೆ ಹೆಚ್ಚು ಗೆಲ್ಲದಂತೆ ತಡೆಯಲು  ಕೆಲವು ಜನಪ್ರಿಯ ಹಿರಿಯ ಸಚಿವರನ್ನು ಲೋಕಸಭೆ , ಅಭ್ಯರ್ಥಿಗಳನ್ನಾಗಿಸುವ  ಯೋಜನೆಯನ್ನು ಕೈ ಪಾಳಯ ರೂಪಿಸಿದೆ. ಕೆಲ ಗುಪ್ತಚರ ಮಾಹಿತಿಯಂತೆ ಕಾಂಗ್ರೆಸ್ ಪಕ್ಷ ಹಿರಿಯ ಸಚಿವರು ಬಿಜೆಪಿ ಸಂಸದರ ವಿರುದ್ಧ ಕಣಕ್ಕಿಳಿಯುವುದರಿಂದ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ನಿಶ್ಚಿತವೆಂದು ಭಾವಿಸಿದೆ. ಇಷ್ಟಾಗಿಯೂ ಕಾಂಗ್ರೆಸ್  ಉನ್ನತ ನಾಯಕರು ತಮ್ಮ ಆಯ್ಕೆಗಳನ್ನು ಎಚ್ಚರಿಕೆಯಿಂದ ಮಾಡಬೇಕಿದೆ.ಅಲ್ಲದೆ ಪಕ್ಷದಲ್ಲಿ ಈ ಸಂಬಂಧ ಇನ್ನೂ ಕೆಲ ಗೊಂದಲಗಳಿದೆ. ಲೋಕಸಭೆ ಕಣಕ್ಕಿಳಿಸಬಹುದಾದ ಮೂರು-ನಾಲ್ಕು ಸಚಿವರ ರಾಜೀನಾಮೆ ಪಡೆಯಬೇಕಾಗುವುದೆ ಅಥವಾ ಸಚಿವ ಸ್ಥಾನದಲ್ಲಿರುವಾಗಲೇ ಅವರನ್ನು ಕಣಕ್ಕೆ ಕಳಿಸಬಹುದೆ ಎನ್ನುವ ಸಂಬಂಧ ಇನ್ನೂ ಚರ್ಚೆ ನಡೆದಿದೆ.  ಕೃಷ್ಣ ಬೈರೆ ಗೌಡ, ಆರ್.ವಿ.ದೇಶಪಾಂಡೆ ಮತ್ತು ರಮೇಶ್ ಜಾರಕಿಹೋಳಿ ಅವರುಗಳನ್ನು ಕಣಕ್ಕಿಳಿಸಿದರೆ  ಪಕ್ಷ ಆ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ ಎನ್ನುವ ಭಾವನೆ ಇದೆ.ಎಂದು  ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ದೇಶಪಾಂಡೆ

ಅವರ ಆಯ್ಕೆ ಮಾಡಲು ಪಕ್ಷ ಮುಂದಾಗಿದೆ.ಸಾಕಷ್ಟು ವಿವಾದಗಳ ಬಳಿಕ ಈಗಲೂ ಹೆಗಡೆ ಜನಪ್ರಿಯತೆ ಕುಗ್ಗಿಲ್ಲ. ಆದರೆ ಒಂದಿಒಮ್ಮೆ ದೇಶಪಾಂಡೆ ಅವರ ವಿರುದ್ಧ ನಿಂತಿದ್ದಾದರೆ  ಆಗ ಹೆಗಡೆ ಸೋಲು ಖಚಿತ ಎನ್ನುವುದು ಕೈ ನಾಯಕರ ಆಂಬೋಣ.
ಲೋಕಸಭೆಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಪ್ರತಿನಿಧಿಸುವ ಬೆಳಗಾವಿ ಕ್ಷೇತ್ರದಲ್ಲಿ ಅದೇ ಜಿಲ್ಲೆಯವರಾದ ರಮೇಶ್ ಜಾರಕಿಹೋಳಿ ಅವರನ್ನು ಕಣಕ್ಕಿಳಿಸುವ ಮೂಲಕ ಜಾರಕಿಹೋಳಿ ಬ್ರದರ್ಸ್ ಜನಪ್ರಿಯತೆಯನ್ನು ಪಕ್ಷದ ಜಯಕ್ಕೆ ಉಪಯೋಗಿಸಿಕೊಲ್ಲಲು ನಾಯಕರು ಚಿಂತನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಂಸದ ಅಂಗಡಿ ಮೋದಿ ಹಾಗೂ ಯಡಿಯೂರಪ್ಪ ಜನಪ್ರಿಯತೆಯ ಕಾರಣ ಗೆದ್ದಿದ್ದಾರೆ. ಒಂದು ವೇಳೆ ಜಾರಕಿಹೋಳಿ ಬಿರುಸಿನ ಪ್ರಚಾರ ನಡೆಸಿದ್ದಾದರೆ ಸುರೇಶ್ ಅಂಗಡಿಯನ್ನು ಸೋಲಿಸಬಹುದು ಎನ್ನುವುದು ಪಕ್ಷದ ನಾಯಕರ ಆಂಬೋಣ. ಇತ್ತೀಚಿನ ವಿಧಾನಸಭೆ ಚುನಾವಣೆಗಳ ಮುಂಚೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ನಡೆಸಿದ್ದ ರ್ಯಾಲಿಯ ಹೊರತಾಗಿಯೂ ಜಿಲ್ಲೆಯ ಬಹುತೇಕ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಶಸ್ವಿ ಪ್ರದರ್ಶನ ನೀಡಿದೆ.ಅಲ್ಲದೆ ಇದಾಗಲೇ ಬೆಳಗಾವಿ ಅಥವಾ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಜಾರಕಿಹೋಳಿ ಸಹ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಂತ್ರಿ ಕೃಷ್ಣ ಬೈರೆ ಗೌಡರನ್ನು ಬಿಜೆಪಿಯ ಸದಾನಂದ ಗೌಡ ವಿರುದ್ಧ ನಿಲ್ಲಿಸಲು ಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ.ಕಾಂಗ್ರೆಸ್ ನ ಈ ಯೋಜನೆಗಳು ಇನ್ನೂಪ್ರಾಥಮಿಕ ಹಂತದಲಿದೆ. ಆದರೆ ಗುರುವಾರ ಹೊಸದಿಲ್ಲಿಯಲ್ಲಿ  ನಡೆಯುವ ಸಭೆಯಲ್ಲಿ ನಾಯಕರು ಈ ಸಂಬಂಧ ಮಾತನ್ನೆತ್ತಿದ್ದಾದರೆ ಹೈಕಮಾಂಡ್ ತೀರ್ಮಾನದ ಮೇಲೆ ಇದು ಸಾಧ್ಯವಾಗುತ್ತದೆ.
ಆದರೆ ರಾಜ್ಯ ರಾಜಕೀಯ ಪರಿಸ್ಥಿತಿ ಸಹ ಇದಕ್ಕೆ ಅನುಕೂಲವಾಗಿರಬೇಕು, ಒಂದೊಮ್ಮೆ ಹಿರಿಯ ಸಚಿವರನ್ನು ಲೋಕಸಭೆಗೆ ಕಳಿಸಿದರೆ ಆ ಸ್ಥಾನಕ್ಕೆ ಇನ್ನಾರನ್ನು ನೇಮಕ ಮಾಡಬಹುದು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಸಮ್ಮಿಶ್ರ ಸರಕಾರವು ರಾಜ್ಯದಲ್ಲಿ ಎಷ್ಟು ಸ್ಥಾನಗಳನ್ನು ಹೊಂದಲಿದೆ ಎನ್ನುವುದನ್ನು ಪರಿಗಣಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಈ ಕ್ರಮವನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಕ್ಷೇತ್ರಗಳಿಗೆ ಹಿರಿಯರನ್ನು ಹೆಸರಿಸುವ ಮೊದಲು ಸರ್ಕಾರ ಅಸ್ಥಿರಗೊಳ್ಳುವ ಅಪಾಯವನ್ನು ತಪ್ಪಿಸಲು  ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ವಿಧಾನಸಭಾ ಉಪಚುನಾವಣೆಗಳಿಗಾಗಿ ಅಂತಿಮಗೊಳಿಸಬೇಕು.

About the author

ಕನ್ನಡ ಟುಡೆ

Leave a Comment