ರಾಜಕೀಯ

ಲೋಕಸಭೆ ಚುನಾವಣೆ: ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಬಿಜೆಪಿ ಪ್ರಣಾಳಿಕೆ ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಕಾರ್ಯಕ್ರಮದಲ್ಲಿ ಹಲವು ಸಚಿವರೂ ಭಾಗಿಯಾಗಲಿದ್ದಾರೆ. ಸಂಕಲ್ಪ ಪತ್ರ ತಯಾರಿಸಲು ಬಿಜೆಪಿ ಸುಮಾರು 3 ತಿಂಗಳ ಕಾಲ ಶ್ರಮಿಸಿದೆ. ಪ್ರಣಾಳಿಕೆ ತಯಾರಿಗೆ ಜನರಿಂದಲೇ ಸಲಹೆ ಪಡೆಯುವ ಸಲುವಾಗಿ “ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾಥ್‌’ ಸೇರಿದಂತೆ ಹಲವು ಅಭಿಯಾನಗಳನ್ನೂ ನಡೆಸಿದೆ. ಜನವರಿ 6ರಂದೇ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಬಿಜೆಪಿ 20 ಸದಸ್ಯರ ಪ್ರಣಾಳಿಕೆ ಸಮಿತಿ ರಚಿಸಿತ್ತು. ಬಳಿಕ ರಾಜನಾಥ್‌ ಅವರು ಪ್ರಣಾಳಿಕೆ ಸಂಬಂಧ ಕೆಲಸ ಮಾಡಲು 15 ಉಪ ಸಮಿತಿಗಳನ್ನು ರಚಿಸಿದ್ದರು.

About the author

ಕನ್ನಡ ಟುಡೆ

Leave a Comment