ರಾಜಕೀಯ

ಲೋಕಸಭೆ ಚುನಾವಣೆ ಚಾಪರ್ ರಾಜಕೀಯ: ಹೆಲಿಕಾಪ್ಚರ್ ಸಿಗದಿದ್ದಕ್ಕೆ ಜೆಡಿಎಸ್ ನಾಯಕರ ಅಳಲು

ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರ ಭರಾಟೆಯಿಂದ ಸಾಗುತ್ತಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಕೇಸರಿ ಪಕ್ಷ ಮತ್ತು ಮೈತ್ರಿ ಪಕ್ಷಗಳು ಚಾಪರ್ ರಾಜಕೀಯ ನಡೆಯುತ್ತಿದೆ. ಈ ಸಂಬಂಧ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ನನ್ನ ಮಗ ಮುಖ್ಯಮಂತ್ರಿ, ಅವರಿಗೆ ಹೆಲಿಕಾಪ್ಟರ್ ಸಿಗಲಿಲ್ಲ, ಇದಕ್ಕೆ ಅವರು ಬೇಸರ ವ್ಯಕ್ತ ಪಡಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯ ಘಟಕಗಳು ಒಂದೊಂದು ಹೆಲಿಕಾಪ್ಟರ್ ಹೊಂದಿವೆ, ಆದರೆ  ಜೆಡಿಎಸ್ ಗೆ ಇಲ್ಲ, ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಭದ್ರಾವತಿಗೆ  ಹೆಲಿಕಾಪ್ಟರ್ ನಲ್ಲಿ ತೆರಳಿದ್ದರು, ಲಭ್ಯವಿರುವ ಎಲ್ಲಾ ಹೆಲಿಕಾಪ್ಟರ್ ಗಳನ್ನು ಬಿಜೆಪಿ ಬುಕ್ ಮಾಡಿಕೊಂಡಿದೆ, ಹೀಗಾಗಿ ಜೆಡಿಎಸ್ ಕಾಪ್ಚರ್ ಸಿಕ್ಕಿಲ್ಲ ಎಂದು ಜೆಡಿಎಸ್ ವಕ್ತಾರ  ತನ್ವೀರ್ ಅಹ್ಮದ್ ಹೇಳಿದ್ದಾರೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಮಗೆ ಕಾಪ್ಟರ್ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿ.ಟಿ ರವಿ ಕಾಪ್ಟರ್ ಬೇಕಿದ್ದವರೂ ಮೊದಲೇ ಬುಕ್ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು 85 ಸಾವಿರ, ಹಾಗೂ ಗಂಟೆಗೆ 1.35 ಲಕ್ಷ, ಆದರೆ ಚುನಾವಣೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿರುವ ಕಾರಣ, ಸಿಂಗಲ್ ಎಂಜಿನ್ ಗೆ 4.5 ಲಕ್ಷ ಹಾಗೂ ಎರಡು ಎಂಜಿನ್ ಚಾಪ್ಟರ್ ಗೆಲ ಗಂಟೆಗೆ 7 ಲಕ್ಷ ರು ನೀಡಬೇಕಿದೆ. ಕೇಂದ್ರ ಬಿಜೆಪಿ ಸರ್ಕಾರ ಹೆಲಿಕಾಪ್ಟರ್ ಅಭಾವ ಮೂಡಿಸಿದೆ, ಹೀಗಾಗಿ ನಾವು ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚೆಗೆ ಕುಮಾರಸ್ವಾಮಿ ಹೇಳಿದ್ದರು. ವ್ಯವಸ್ಥಿತವಾಗಿ ನನಗೆ ಹೆಲಿಕಾಪ್ಟರ್​ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್​​​ ಸಿಕ್ಕಿದರೆ ನಾನು ಹೆಚ್ಚು ಜನರನ್ನು ಸಂಪರ್ಕಿಸಿ ಮತಯಾಚಿಸುತ್ತೇನೆ. ಇದನ್ನು ತಪ್ಪಿಸಲು ಕೇಂದ್ರ ನಾಯಕರು ನನಗೆ ಹೆಲಿಕಾಪ್ಟರ್ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೆಲಿಕಾಪ್ಟರ್​ ಸಿಗದೆ ರಸ್ತೆ ಮಾರ್ಗದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದು ಕೇಂದ್ರ ನಾಯಕರ ಪಿತೂರಿ ಎಂದು ಸಿಎಂ ಕುಮಾರಸ್ವಾಮಿ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದರು.
ಭಾನುವಾರ ಕುಮಾರಸ್ವಾಮಿ ರೆಗ್ಯೂಲರ್ ವಿಮಾದಲ್ಲೇ  ಉಡುಪಿಗೆ ತೆರಳಿದರು,.ಚಾಪರ್ ಸಿಗದ ಕಾರಣ ಮೈಸೂರಿಗೆ ರಸ್ತೆ ಮೂಲಕವೇ ಸಾಗಿದರು, ಇನ್ನೂ ಹೆಲಿಕಾಪ್ಟರ್ ಸಿಗದ್ದಕ್ಕೆ ಬಿಜೆಪಿಯೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ, ಚಾಪರ್ ಕಂಪನಿಗಳ ಮೇಲೆ ಒತ್ತಡ ಹೇರಿರುವ ಬಿಜೆಪಿ ಎಲ್ಲರಿಗೂ ಕಾಪ್ಟರ್ ಸಿಗದಂತೆ ನೋಡಿಕೊಂಡಿದ್ದಾರೆ. ಆದರೆ ಕರ್ನಾಟಕ ಕಾಂಗ್ರೆಸ್ ಘಟಕಕ್ಕೆ ಒಂದು ಹೆಲಿಕಾಪ್ಟರ್ ಸಿಕ್ಕಿದೆ.

About the author

ಕನ್ನಡ ಟುಡೆ

Leave a Comment