ರಾಷ್ಟ್ರ ಸುದ್ದಿ

ಲೋಕಸಭೆ ಚುನಾವಣೆ: ಬಿಜೆಡಿ ಮಾಜಿ ಸಂಸದ ಜಯ್ ಪಾಂಡ ಬಿಜೆಪಿ ಸೇರ್ಪಡೆ

ನವದೆಹಲಿ: ಬಿಜೆಡಿ ಮಾಜಿ ಸಂಸದ ಬೈಜಯಂತ್ ‘ಜಯ್’ ಪಾಂಡ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದು, ಒಡಿಶಾದಲ್ಲಿ ಕೇಸರಿ ಪಡೆಗೆ ಬಲಬಂದಂತಾಗಿದೆ. ಲೋಕಸಭೆ ಚುನಾವಣೆಯೊಂದಿಗೆ ಒಡಿಶಾ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಪಾಂಡ ಸೇರ್ಪಡೆ ಬಿಜೆಪಿ ವಿಶೇಷವಾಗಿ ಒಡಿಶಾ ಕರಾವಳಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ಮೂಡಿಸಿದೆ. ಬಿಜೆಡಿಯಿಂದ ಕೇಂದ್ರಪರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಹಾಗೂ ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಪಾಂಡ ಅವರು ಇಂದು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕೇಸರಿ ಪಡೆ ಸೇರಿದರು.

About the author

ಕನ್ನಡ ಟುಡೆ

Leave a Comment