ರಾಜ್ಯ ಸುದ್ದಿ

ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಜಿ. ಪರಮೇಶ್ವರ್​

ಧಾರವಾಡ: ವರ್ಗಾವಣೆ ಆಡಳಿತದ ಒಂದು ಭಾಗ, ಆ ಭಾಗವಾಗಿ ವರ್ಗಾವಣೆಗಳು ನಡೆಯುತ್ತಿವೆ. ಅದೇನು ದೊಡ್ಡ ವಿಚಾರ ಅಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್​ ತಿಳಿಸಿದ್ದಾರೆ. ಧಾರವಾಡದ ಚರಂತಿಮಠ ಗಾರ್ಡನ್‌ನಲ್ಲಿರುವ ‘ಕೈ’ ಮುಖಂಡ ಶಿವಶಂಕರ ಹಂಪಣ್ಣನವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ ನಡೆದ ವರ್ಗಾವಣೆ ಬಗ್ಗೆ ಮಾತನಾಡಿದರು.

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಬಿಜೆಪಿ ಆಫರ್ ವಿಚಾರ ನೀಡಿರುವ ಕುರಿತು ಪ್ರತಿಕ್ರಿಯಿಸಿ, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ನನಗೆ ಬಿಜೆಪಿಯಿಂದ ಆಹ್ವಾನ ಬರುತ್ತಿದೆ ಎಂದು ಹೇಳಿಕೊಂಡಿದ್ದರು. ಹಣದ ಆಮಿಷದ ಬಗ್ಗೆ ಯಾವುದೇ ವಿಚಾರ ನನಗೆ ಹೇಳಿರಲಿಲ್ಲ. ಈಗ ದಿನೇಶ ಗುಂಡೂರಾವ್ ಅಧ್ಯಕ್ಷರಾಗಿದ್ದು, ಅವರು ಈ ಕುರಿತು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ರಬಲ್​ಶೂಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ತಮ್ಮನ್ನು ಟ್ರಬಲ್ ಶೂಟರ್ ಎಂದು ಏಕೆ ಅಂತಿದ್ದಾರೆಂದು ಗೊತ್ತಿಲ್ಲ ಎಂದರು. ಆಯಾ ಕಾಲಕ್ಕೆ ತಕ್ಕಂತೆ ಪ್ರಮೋಷನ್​ ಆಗಿದೆ. ಪ್ರಮೋಷನ್​​ಗೆ ಸಂಬಂಧಿಸಿದಂತೆ ಸುಪ್ರೀಂ ತಿರ್ಪು ಹೊರಬಿದ್ದುದ್ದು, ಆ ಕಾರಣಕ್ಕೆ ಪ್ರಕ್ರಿಯೆ ನಿಂತಿರಬಹುದು ಎಂದು ಪೊಲೀಸ್ ಅಧಿಕಾರಿಗಳ ಪ್ರಮೋಷನ್ ವಿಚಾರವಾಗಿ ಮಾತನಾಡಿದರು.

About the author

ಕನ್ನಡ ಟುಡೆ

Leave a Comment