ಸುದ್ದಿ

ವರ್ಲ್ಡ್‌ ವೈಡ್ ವೆಬ್‌ನ 30ನೇ ಜನ್ಮದಿನಕ್ಕೆ ಗೂಗಲ್ ಶುಭಾಶಯ

ಗೂಗಲ್ ಡೂಡಲ್: ವರ್ಲ್ಡ್‌ ವೈಡ್ ವೆಬ್‌ನ 30ನೇ ಜನ್ಮದಿನಕ್ಕೆ ಗೂಗಲ್ ಶುಭಾಶಯ ಆಧುನಿಕ ಜಗತ್ತಿನ ಪ್ರಮುಖ ಸಂಪರ್ಕ ವಿಧಾನವಾದ ಇಂಟರ್‌ನೆಟ್‌ ಬಳಕೆ ಈಗ ಎಲ್ಲರಿಗೂ ಗೊತ್ತು. ಆದರೆ ಅದರ ಹಿಂದಿನ ತಾಂತ್ರಿಕತೆ ಬಗ್ಗೆ ಬಹುತೇಕ ಸಾಮಾನ್ಯ ಜನರಿಗೆ ಅರಿವಿರುವುದಿಲ್ಲ. www, http ಇಂತಹ ಕೆಲವು ತಾಂತ್ರಿಕ ಪದಗಳನ್ನು ನೋಡಿರಬಹುದೇ ವಿನಾ ಅದರ ವಿವರಣೆ ತಿಳಿದಿರಲಿಕ್ಕಿಲ್ಲ. ಅಂತಹ ಅಪರೂಪದ ಮಾಹಿತಿ ಇಲ್ಲಿದೆ ನೋಡಿ. ಮಾನವ ಜಗತ್ತಿನ ಭವಿಷ್ಯವನ್ನೇ ಬದಲಾಯಿಸಿದ ಮಹಾ ಸಂಶೋಧನೆ ವರ್ಲ್ಡ್‌ ವೈಡ್‌ ವೆಬ್‌ (World Wide Web) ಆವಿಷ್ಕಾರಗೊಂಡು ಇಂದಿಗೆ 30 ವರ್ಷಗಳು ಸಂದಿವೆ. ಸರ್ಚ್‌ ಎಂಜಿನ್ ದೈತ್ಯ ಗೂಗಲ್ ವಿಶೇಷ ಡೂಡಲ್‌ ಮೂಲಕ ಇದನ್ನು ಇಂದು ನೆನಪಿಸಿಕೊಂಡಿದೆ.

About the author

ಕನ್ನಡ ಟುಡೆ

Leave a Comment