ಕ್ರೀಡೆ

ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದ ಪಿವಿ ಸಿಂಧುಗೆ ರೂ.10 ಲಕ್ಷ, ಸಮೀರ್ ವರ್ಮಾಗೆ 3 ಲಕ್ಷ ರೂ. ಬಹುಮಾನ

ನವದೆಹಲಿ: ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಸಮೀರ್ ವರ್ಮಾ ಅವರಿಗೆ ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಗದು ಬಹುಮಾನ ಘೋಷಣೆ ಮಾಡಿದೆ.
ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದಒಲಂಫಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರಿಗೆ 10 ಲಕ್ಷ ರೂ ಹಾಗೂ ಸಮೀರ್ ವರ್ಮ ಅವರಿಗೆ 3ಲಕ್ಷ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಕಳೆದ ವಾರ ಚೀನಾದ ಗುವಾಂಗ್ಜೌ ನಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಟೂರ್ ಮಹಿಳಾ ಸಿಂಗಲ್ಸ್  ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಜಪಾನ್‌ ನ ನಜೋಮಿ ಒಕೋರ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಭಾರತ ಹಲವು ವರ್ಷಗಳ ಬಳಿಕ ಬಿಡಬ್ಲ್ಯೂಎಫ್‌ನಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಸೃಷ್ಠಿಸಿದೆ . ಹಾಗೂ ಸಿಂಧು 2017ರಲ್ಲಿ ಕೊರಿಯಾ ವಿರುದ್ದ ಪ್ರಶಸ್ತಿಯನ್ನ ಪಡೆದಿದ್ದರು.
ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮಾ ಸೆಮಿ ಪೈನಲ್ ‌ವರೆಗೂ ಪ್ರವೇಶ ಮಾಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಗದು ಬಹುಮಾನ ಘೋಷಣೆ ಮಾಡಿದ್ದು, ಸಂಸ್ಥೆಯ ಅಧ್ಯಕ್ಷ ಹಿಮಂತ್ ಬಿಸ್ವಾ ಸರ್ಮಾ ಪಿ.ವಿ ಸಿಂಧು ಹಾಗೂ ಸಮೀರ್ ಗೆ ಧನ್ಯವಾದಗಳನ್ನು ಅರ್ಪಿಸಿದರು.

About the author

ಕನ್ನಡ ಟುಡೆ

Leave a Comment