ರಾಷ್ಟ್ರ ಸುದ್ದಿ

ವಸುಂದರಾ ರಾಜೇ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ: ಯಾದವ್ ಸ್ಪಷ್ಟನೆ

ಜೈಪುರ: ವಸುಂದರಾ ರಾಜೇಯವರ ಫಿಟ್ನೆಸ್ ಕುರಿತಂತೆ ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಜೆಡಿಯು ಮಾಜಿ ನಾಯಕ ಶರದ್ ಯಾದವ್ ಅವರು ಶುಕ್ರವಾರ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ರಾಜೇ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸುಂದರಾ ರಾಜೇ ವಿರುದ್ದ ನಾನು ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅದೊಂದು ಹಾಸ್ಯಸ್ಪದವಷ್ಟೇ. ರಾಜೇ ಜೊತೆಯಲ್ಲಿ ಬಹಳ ಹಿಂದಿನಿಂದಲೂ ನಂಟು ಹೊಂದಿದ್ದೆ. ನಾನು ನೀಡಿದ್ದ ಹೇಳಿಕೆ ಅವಹೇಳನಕಾರಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಚಾರವೊಂದರಲ್ಲಿ ಮಾತನಾಡಿದ್ದ ಯಾದವ್ ಅವರು, ವಸುಂದರಾ ರಾಜೇ ಅವರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಅವರಿಗೆ ಅವರ ಆರೋಗ್ಯ ಹಾಗೂ ದೇಹದ ಸೌಂದರ್ಯದ ಕುರಿತು ಕಾಳಜಿ ವಹಿಸಲು ಸಮಯವೇ ಇಲ್ಲದಂತಾಗಿದೆ. ಆ ಕಾರಣಕ್ಕಾದರೂ ನೀವು ಈ ಬಾರಿ ಬಿಜೆಪಿಗೆ ವಿಶ್ರಾಂತಿ ನೀಡಬೇಕು. ಸಿಎಂ ವಸುಂದರಾ ರಾಜೇ ಬಹಳ ಸುಸ್ತಾಗಿದ್ದಾರ. ಅವರಿಗೆ ರಾಜಕೀಯದಿಂದ ಸ್ವಲ್ಪ ಬಿಡುವು ನೀಡೋಣ. ಮೊದಲೆಲ್ಲಾ ಸಣಣಗಿದ್ದರು. ಈಗ ತಮ್ಮ ಬಗ್ಗೆ ಕಾಳಜಿ ವಹಿಸಲು ಬಿಡುವಿಲ್ಲದೆ. ಯಾವ ರೀತಿ ದಪ್ಪಾಗಾಗಿದ್ದಾರೆ ನೋಡಿ. ಆಕೆ ನಮ್ಮ ಮಧ್ಯಪ್ರದೇಶದ ಮಗಳು, ಆಕೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯೂ ಹೌದು ಎಂದು ಗೇಲಿ ಮಾಡಿದ್ದರು.
ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜೇ ಅವರು, ಯಾದವ್ ಅವರ ಹೇಳಿಕೆಯಿಂದ ನನಗೆ ಅವಮಾನವಾಗಿದೆ. ಯಾದವ್ ಹೇಳಿಕೆ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

About the author

ಕನ್ನಡ ಟುಡೆ

Leave a Comment