ರಾಷ್ಟ್ರ ಸುದ್ದಿ

ವಸುಂಧರಾ ರಾಜೆ ದಪ್ಪಗಾಗಿದ್ದಾರೆ ಎಂಬ ಮಾತಿಗೆ ಕ್ಷಮೆ ಕೋರಿದ ಶರದ್​ ಯಾದವ್​

ದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ದಣಿದಿದ್ದಾರೆ, ದಪ್ಪಗಾಗಿದ್ದಾರೆ ಅವರಿಗೆ ವಿಶ್ರಾಂತಿ ನೀಡಬೇಕಿದೆ ಎಂಬ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಲೋಕತಾಂತ್ರಿಕ ಜನತಾದಳದ ಸಂಸ್ಥಾಪಕ, ಹಿರಿಯ ರಾಜಕಾರಣಿ ಶರದ್​ ಯಾದವ್​ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿರುವ ಅವರು, “ನನ್ನ ಹೇಳಿಕೆಗೆ ಸಂಬಂಧಿಸಿದಂತೆ ವಸುಂಧರಾ ರಾಜೆ ಅವರು ನೀಡಿದ ಪ್ರತಿಕ್ರಿಯೆಯನ್ನು ನಾನು ಗಮನಿಸಿದೆ. ಅವರ ಕುಟುಂಬದೊಂದಿಗೆ ನನಗೆ ಬಹಳ ಕಾಲದಿಂದಲೂ ಸ್ನೇಹ ಸಂಬಂಧವಿದೆ. ನನ್ನ ಹೇಳಿಕೆ ಅವರಿಗೆ ಬೇಸರ ತರಿಸಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ. ಈ ಬಗ್ಗೆ ಅವರಿಗೆ ಪತ್ರ ಬರೆಯುತ್ತೇನೆ,” ಎಂದು ಹೇಳಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಯಾದವ್​ ವಸುಂಧರಾ ರಾಜೇ ಅವರು ಮಧ್ಯಪ್ರದೇಶದ ಮಗಳು. ಅವರಿಗೆ ವಿಶ್ರಾಂತಿ ನೀಡಿ, ಅವರು ಸಾಕಷ್ಟು ದಣಿದಿದ್ದಾರೆ, ಈಗ ಬಹಳ ದಪ್ಪಗಾಗಿದ್ದಾರೆ, ಈ ಹಿಂದೆ ಸಣ್ಣಗಿದ್ದರು ಎಂದಿದ್ದರು.

ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹೇಳಿಕೆ ತಮಗಷ್ಟೇ ಅಲ್ಲ ಎಲ್ಲ ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಸ್ವತಃ ವಸುಂಧರಾ ರಾಜೆ ಅವರು ಹೇಳಿದ್ದರು.

About the author

ಕನ್ನಡ ಟುಡೆ

Leave a Comment