ಸುದ್ದಿ

ವಾಟಾಳ್ ತವರಲ್ಲೇ ನೀರಸ ಬಂದ್

ಬೆಂಗಳೂರು: ವಿವಿಧ ಬೇಡಿಕೆಗಳನ್ನಿಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅದೂ ಸ್ವತಃ ವಾಟಾಳ್ ನಾಗರಾಜ್ ತವರು ಜಿಲ್ಲೆಯಾದ ಚಾಮರಾಜನಗರದಲ್ಲೇ ಜನ ಬಂದ್ ಗ ತಲೆಕೆಡಿಸಿಕೊಂಡಿಲ್ಲ. ವಾಹನ ಸಂಚಾರ ಹಾಗೂ ಜನ ಜೀವನ ಯಥಾಸ್ಥಿತಿಯಲ್ಲಿದೆ. ಮೈಸೂರು, ಬಳ್ಳಾರಿ, ಬೆಂಗಳೂರು ಸೇರಿದಂತೆ ಹಲೆವೆಡೆ ವಾಹನ ಸಂಚಾರವಿದ್ದು ಅಂಗಡಿ ಮುಂಗಟ್ಟುಗಳು ತೆರೆದಿವೆ. ಅಲ್ಲದೆ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿಲ್ಲ. ಹೀಗಾಗಿ ಬಂದ್ ಬಿಸಿ ರಾಜ್ಯದ ಬಹುತೇಕ ಕಡೆ ತಟ್ಟಿಲ್ಲ. ಆದರೆ ಕೋಲಾರದಲ್ಲಿ ಮಾತ್ರ ಸಣ್ಣ ಮಟ್ಟಿನ ಪ್ರತಿಭಟನೆ ಕಾರ್ಯಕ್ರಮಗಳು ನಡೆದ ವರದಿಯಾಗಿದೆ. ಅದರ ಹೊರತಾಗಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಬೆಂಗಳೂರಿನ ಕೆಲವೆಡೆ ಬಂದ್ ನೆಪ ಹೇಳಿಕೊಂಡು ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರ ಹೊರತಾಗಿ ಜನ ಜೀವನ ಯಥಾಸ್ಥಿತಿಯಲ್ಲಿದೆ.

ಬಸ್ ತಡೆಯುತ್ತೇವೆ, ಹೋಟೆಲ್ ಮುಚ್ಚಿಸುತ್ತೇವೆ:

About the author

ಕನ್ನಡ ಟುಡೆ

Leave a Comment