ತಂತ್ರಜ್ಞಾನ

ವಾಟ್ಸಪ್​​ ಹ್ಯಾಕ್​​ : ಇಲ್ಲಿದೆ ಇಸ್ರೇಲ್​​ ಅಧಿಕಾರಿಗಳು ಬಿಚ್ಚಿಟ್ಟ ಕರಾಳ ಸತ್ಯಗಳು

ಬೆಂಗಳೂರು: ಸಮಾಜದಲ್ಲಿ ದಿನೇದಿನೇ ಹ್ಯಾಕರ್​​ಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಹಳ್ಳಿ ಹೈದನಿಂದ ಇಡೀದು ನಗರದ ಪ್ರತಿಷ್ಠಿತ ಶ್ರೀಮಂತರವರೆಗೂ ಫೇಸ್ಬುಕ್​​​, ವಾಟ್ಸಪ್​​ ಬಳಸುತ್ತಿದ್ದಾರೆ. ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೈಮ್​​ಗಳ ಸಂಕ್ಯೆ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಲೇ ಇವೆ. ಇಷ್ಟು ದಿನ ಫೇಸ್‌ಬುಕ್ ಅನ್ನು ಬೆನ್ನು ಬಿಡದಂತೆ ಕಾಡಿದ್ದ ಹ್ಯಾಕರ್‌ಗಳ ಕಾಟ ಈಗ ವಾಟ್ಸ್‌ ಆಪ್ ಮೇಲೆ ಬಿದ್ದಂತಿದೆ.

ಇತ್ತೀಚಿಗೆ ಫೇಸ್‌ಬುಕ್ ಅಷ್ಟೇ ಅಲ್ಲದೇ ಕಿಡಿಗೇಡಿಗಳು  ವಾಟ್ಸ್‌ಆಪ್ ಆಪ್​ ಅನ್ನು ಕೂಡ ಹ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಆಘಾತಕ್ಕೊಳಗಾದ ಜನರಲ್ಲಿ ಸದ್ಯ ವಾಟ್ಸ್‌ಆಪ್ ನಮಗೆ ಸೇಫ್ ಇದೆಯೇ, ಇಲ್ಲವೇ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಸುದ್ದಿ ಮಾಡುತ್ತಲೇ ಬಂದಿವೆ. ಈ ಬೆನ್ನಲ್ಲೇ ಇದೀಗ ವಾಟ್ಸಪ್​​ ಹ್ಯಾಂಕಿಗ್​​ ಬಗ್ಗೆ ಇಸ್ರೇಲ್​​ ಸರ್ಕಾರ ಒಂದಷ್ಟು ಸತ್ಯಗಳನ್ನು ಬಿಚ್ಚಿಟ್ಟಿದ್ಧಾರೆ.

ವಾಟ್ಸ್‌ಆಪ್ ಹ್ಯಾಕಿಂಗ್​​ ವಿಚಾರದ ಸುತ್ತ ಚರ್ಚೆ ನಡೆಯುತ್ತಿದಂತೆಯೇ​ ಇಸ್ರೇಲ್ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರ ಎಚ್ಚೆತ್ತುಕೊಂಡಿತ್ತು. ಬಳಿಕ ಇಸ್ರೇಲ್​​ ಅಧಿಕಾರಿಗಳು ಹಾಕಿಂಗ್​​ ಜಾಲವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಹ್ಯಾಕರ್​​​ಗಳು ಹೇಗೆ? ವಾಟ್ಸಪ್​​​ ಹ್ಯಾಕ್​​ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ವಿದೇಶಿ ನ್ಯೂಸ್​​ ವೆಬ್​​ ಪೋರ್ಟಲ್​​​ವೊಂದು​ ವರದಿ ಮಾಡಿದೆ.

ವಾಟ್ಸ್‌ಆಪ್ ಹ್ಯಾಕ್ ಬಗ್ಗೆ ವರದಿ: ZDNet ಎಂಬ ವೆಬ್​​ ಪೋರ್ಟಲ್​​​ ಮಾಡಿದ ವರದಿ ಪ್ರಕಾರ, ಮೊಬೈಲ್ ಸರ್ವೀಸ್​ ಪ್ರೊವೈಡರ್​ ಅನ್ನು ಬಳಸಿ ವಾಟ್ಸ್‌ಆಪ್ ಅನ್ನು ಹ್ಯಾಕ್​ ಮಾಡಲಾಗುತ್ತಿದೆ. ಹ್ಯಾಕರ್​ಗಳು ಮೊದಲು ವಾಯ್ಸ್​ಮೇಲ್​ಗಳನ್ನು ಟಾರ್ಗೇಟ್​​ ಮಾಡುತ್ತಾರೆ. ಬಳಿಕ ಅದನ್ನೆ ಗುರಿಯಾಗಿಸಿಕೊಂಡು, ಯಾರೂ ಡಿಫಾಲ್ಟ್​ ಪಾಸ್​ವರ್ಡ್​ ಬದಲಿಸಿರುವುದಿಲ್ಲವೋ, ಅಂತವರಿಗೇ ಗಾಳ ಹಾಕುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹ್ಯಾಕ್ ಆಗುತ್ತಿರುವುದು ಹೇಗೆ?: ವಾಟ್ಸ್‌ಆಪ್ ಬಳಕೆದಾರರ ಫೋನ್ ನಂಬರ್‌ ಕದಿಯುವ ಹ್ಯಾಕರ್‌ಗಳು, ತುಂಬಾ ಸಿಂಪಲ್​​ ಆಗಿ ಎಲ್ಲವನ್ನು ಮುಗಿಸಿಬಿಡುತ್ತಾರೆ. ಮೊದಲು ಬಳಕೆದಾರರ ನಂಬರ್‌ನಿಂದ ಮತ್ತೊಂದು ಖಾತೆಗೆ ವೆರಿಫೈ ಮಾಡಲು ಯತ್ನಿಸುತ್ತಾರೆ. ಈ ವೇಳೆ, ಹ್ಯಾಕರ್ ತಪ್ಪಾದ ಕೋಡ್​ವೊಂದನ್ನು ನಮೂದಿಸುತ್ತಾರೆ. ಹಲವಾರು ಬಾರಿ ತಪ್ಪು ಕೋಡ್​ಗಳನ್ನು ಟೈಪ್​​ ಮಾಡಿದ ಕೂಡಲೇ ವಾಟ್ಸ್‌ಆಪ್ ವಾಯ್ಸ್ ಮೇಲ್​ ಮೂಲಕ ಪಾಸ್​ವರ್ಡ್​ ಕದಿಯಬಹುದಾಗಿದೆ.

ಮಲಗಿರುವ ಹ್ಯಾಕ್  ಸಾಧ್ಯತೆ ಹೆಚ್ಚು: ನೀವು ಸಾಮಾನ್ಯವಾಗಿ ಮಲಗಿರುವಾಗ ಹ್ಯಾಂಕಿಗ್​​ ಸಾಧ್ಯತೆ ಹೆಚ್ಚು. ಹ್ಯಾಕರ್​​ಗಳು ಹಲವು ಬಾರಿ ತಪ್ಪಾದ ಕೋಡ್​ವೊಂದನ್ನು ನಮೂದಿಸುತ್ತಾರೆ. ಇದು ಸುಲಭವಾಗಿ ಹ್ಯಾಕ್​​ ಮಾಡಲು ಸಹಕಾರಿಯಾಗುತ್ತದೆ. ಸರಿಯಾದ ಕೋಡ್ ಒತ್ತಿದರೆ​ ನಿಮಗೆ ಗೊತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ನೀವು ಮೊಬೈಲ್​ ಎತ್ತಿಟ್ಟು ಮಲಗಿರುವಾಗಲೇ ವಾಯ್ಸ್​ಮೇಲ್ ಮೂಲಕ ಪಾಸ್​ವರ್ಡ್​ನ್ನು ಸುಲಭವಾಗಿ ಪಡೆಯುತ್ತಾರೆ.

ಡಿಫಾಲ್ಟ್​ ಪಿನ್ ಹ್ಯಾಕ್: ಹ್ಯಾಕರ್​ಗಳು ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಡಿಫಾಲ್ಟ್​ನಲ್ಲಿರುವ ಬಳಕೆದಾರರ ಖಾತೆಯ ಪಿನ್​ಗಳನ್ನು ಹ್ಯಾಕ್ ಮಾಡುತ್ತಾರೆ. ​ಸಾಮಾನ್ಯವಾಗಿ 0000 ಅಥವಾ 1234 ಪಾಸ್​ವರ್ಡ್​ ಇರುತ್ತದೆ. ಈ ರೀತಿಯ ಪಾಸ್​ವರ್ಡ್​ ಅನ್ನು ರಿಕವರ್​ ಮಾಡುವ ಮೂಲಕ ವಾಟ್ಸ್‌ಆಪ್​ಗಳನ್ನು ಹ್ಯಾಕ್ ಮಾಡಬಹುದಾಗಿದೆ ಎನ್ನಲಾಗಿದೆ.

ಹ್ಯಾಕ್​ಗಿನಿಂದ ಏನು ಲಾಭ?: ಹ್ಯಾಕರ್​ಗಳು ನಿಮ್ಮ ಅಕೌಂಟ್​ಗಳನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಬಳಕೆದಾರರ ಖಾಸಾಗಿ ಮಾಹಿತಿಗಳು ಕದಿಯುತ್ತಾರೆ. ಈ ಮೂಲಕ ನಿಮಗೆ ಬೆದರಿಕೆ ಹಾಕುತ್ತಾರೆ. ವಾಟ್ಸ್‌ಆಪ್‌ನಲ್ಲಿ ನಿಮ್ಮ ಮಾಹಿತಿ ಅವರಿಗೆ  ಸಿಕ್ಕರ ಮತ್ತಷ್ಟು ಸಂಕಷ್ಟವನ್ನು ನೀವು ಅನುಭವಿಸಬೇಕಾಗುತ್ತದೆ.

ಎಚ್ಚರವಾಗಿರಿ: ನಿಮ್ಮ ವಾಟ್ಸಪ್​​ ಅನ್ನು ಎಚ್ಚರಿಕೆಯಿಂದ ಬಳಸಿ. ಪ್ರತಿ ವಾರಕ್ಕೊಮ್ಮೆ ಸೆಕ್ಯೂರಿಟಿ ಕೋಡ್​​ ಬದಲಾಯಿಸಿ. ಮಲಗುವಾಗ ಮೊಬೈಲ್​​ ನಿಮ್ಮ ಬಳಿಯೇ ಇರಲಿ. ಇದೆಲ್ಲದರ ಹೊರತಾಗಿ ಯಾರ ಕೈಗೂ ನಿಮ್ಮ ಮೈಬೈಲ್​​ ಕೊಡಬೇಡಿ. ಆಗಿದ್ದಲ್ಲಿ ಮಾತ್ರ ವಾಟ್ಸಪ್​​ ಹಾಕಿಂಗ್​ನಿಂದ ಪಾರಾಗಬಹುದು.

About the author

ಕನ್ನಡ ಟುಡೆ

Leave a Comment