ರಾಜ್ಯ ಸುದ್ದಿ

ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸದೆ ಲಂಡನ್’ಗೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ರಾಜ್ಯ ಸರ್ಕಾರದಿಂದ ನೀಡುವ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಬುಧವಾರ ಪ್ರಶಸ್ತಿ ಸ್ವೀಕರಿಸದೇ ಬುಧವಾರ ಲಂಡನ್’ಗೆ ಪ್ರಯಾಣ ಬೆಳೆಸಿದ್ದಾರೆ.

ಲಂಡನ್’ನ ಜಾಗತಿಕ ಸಾಧಕರ ಸಮಾವೇಶಕ್ಕೆ ತೆರಳಬೇಕಾದ ಹಿನ್ನಲೆಯಲ್ಲಿ ದೇವೇಗೌಡ ಅವರು ಪ್ರಶಸ್ತಿ ಸ್ವೀಕಾರಕ್ಕೆ ಹಾಜರಾಗಲಿಲ್ಲ. ಬೆಳಿಗ್ಗೆಯೇ ಶಾಸಕರ ಭವನ ಮುಭಾಗದ ತಪೋವನದಲ್ಲಿನ ವಾಲ್ಮೀಕಿ ಪ್ರತಿಮೆಗೆ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೆ ಮಾಲಾರ್ಪಣೆ ಮಾಡಿದ ಅವರು, ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಇದು ವಾಲ್ಮೀಕಿ ಸಮಾಜದ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆಯವರು, ವಾಲ್ಮೀಕಿ ಪ್ರಶಸ್ತಿಗೆ ದೇವೇಗೌಡ ಅವರನ್ನು ಆಯ್ಕೆ ಮಾಡಿದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಕೆಲವರು ಮಗನಿಂದಲೇ ಅಪ್ಪನಿಗೆ ಸನ್ಮಾನ ಎಂದೆಲ್ಲಾ ಬರೆದಿದ್ದರು. ಆದರೆ, ವಾಲ್ಮೀಕಿ ಸಮುದಾಯಕ್ಕೆ ದೇವೇಗೌಡರ ಕೊಡುಗೆ ಏನು ಎಂದು ನೋಡಿದಾಗ ನಾಯಕ ಮತ್ತು ವಾಲ್ಮೀಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ 1984ರಲ್ಲಿ ಶಿಫಾರಸು ಮಾಡಿದ್ದೇ ಅವರು ಎಂಬುದು ತಿಳಿಯಿತು. ಅಲ್ಲದೆ, ವಾಲ್ಮೀಕಿ ಸಮುದಾಯಕ್ಕೆ ಒಂದು ಗುರುಪೀಠ ಕಲ್ಪಿಸಿಕೊಟ್ಟಿದ್ದೂ ಕೂಡ ದೇವೇಗೌಡರೇ. ಇದೆಲ್ಲವನ್ನೂ ಪರಿಗಣಿಸಿಯೇ ಸರ್ಕಾರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment