ಅ೦ತರಾಷ್ಟ್ರೀಯ

ವಾಷಿಂಗ್ಟನ್: ಭಾರತ ಕಠಿಣ ವಾಣಿಜ್ಯ ಸಮಾಲೋಚಕ ದೇಶ, ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಣೆ ವೇಳೆ ಅಧ್ಯಕ್ಷ ಟ್ರಂಪ್ ಹೇಳಿಕೆ

ವಾಷಿಂಗ್ಟನ್: ಭಾರತ ಕಠಿಣ ವಾಣಿಜ್ಯ ಸಮಾಲೋಚಕ ದೇಶ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಬಣ್ಣಿಸಿದ್ದಾರೆ. ಬುಧವಾರ ವೈಟ್ ಹೌಸ್ ನಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆ ವೇಳೆ ದೀಪ ಹಚ್ಚುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ಬಳಿಕ ನೆರೆದಿದ್ದ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ-ಅಮೆರಿಕ ಅತ್ಯಾಪ್ತರಾಷ್ಟ್ರಗಳಾಗಿವೆ. ಮುಂದಿನ ದಿನಗಳಲ್ಲಿ ನಮ್ಮ ವಾಣಿಜ್ಯಾತ್ಮಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ. ನನ್ನ ಪ್ರಕಾರ ಭಾರತ ಕಠಿಣ ಮತ್ತು ಉತ್ತಮ ವಾಣಿಜ್ಯ ಸಮಾಲೋಚಕ ದೇಶವಾಗಿದೆ. ಭಾರತ ಮತ್ತು ಅಮೆರಿಕ ಬಾಂಧವ್ಯ ಮತ್ತಷ್ಟು ವೃದ್ದಿಸಬೇಕು. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ನನ್ನ ಸ್ನೇಹಿತ.. ಈಗ ಇವಾಂಕಾಗೂ ಸ್ನೇಹಿತರಾಗಿದ್ದಾರೆ ಎಂದು ಹೇಳಿದರು. ಅಂತೆಯೇ ನಮ್ಮ ಸರ್ಕಾರ ಭಾರತದೊಂದಿಗಿನ ವಾಣಿಜ್ಯಾತ್ಮಕ ಸಂಬಂಧ ಉತ್ತಮಗೊಳಿಸಲು ಸಾಕಷ್ಟು ಶ್ರಮಿಸುತ್ತಿದೆ. ಭಾರತ ಮತ್ತು ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದಂತೆ ತಮಗೆ ಅಪಾರ ಗೌರವವಿದ್ದು, ಇದೇ ಸ್ನೇಹ-ಸಂಬಂಧವನ್ನು ಮುಂದುವರೆಸಲು ಇಚ್ಛಿಸುತ್ತೇವೆ ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಸೇರಿದಂತೆ ಅಮೆರಿಕ ಸರ್ಕಾರದ ಭಾರತೀಯ ಮೂಲದ ಕಾರ್ಯದರ್ಶಿಗಳು, ಅಧಿಕಾರಿಗಳು ಸೇರಿದಂತೆ ಭಾರತ ಮೂಲದ ಹಲವು ಗಣ್ಯರು ಉಪಸ್ಥಿತರಿದ್ದರು.

About the author

ಕನ್ನಡ ಟುಡೆ

Leave a Comment