ಕ್ರೀಡೆ

ವಿಂಗ್‌ ಕಮಾಂಡರ್ ಅಭಿನಂದನ್‌ಗೆ ಬಿಸಿಸಿಐನಿಂದ ಟೀಂ ಇಂಡಿಯಾ ಜರ್ಸಿ ಮೂಲಕ ವಿಶಿಷ್ಠ ಗೌರವ

ಹೈದರಾಬಾದ್‌: ಪಾಕಿಸ್ತಾನದ ಕಪಿಮುಷ್ಠಿಯಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರಿಗೆ ಗೌರವ ಸಲ್ಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೈದರಾಬಾದ್‌ನಲ್ಲಿ “ವಿಂಗ್‌ ಕಮಾಂಡರ್‌ ಅಭಿನಂದನ್” ಹೆಸರಿನ ಒಂದನೇ ಸಂಖ್ಯೆಯ ಭಾರತ ತಂಡದ ಪೋಷಾಕು ಬಿಡುಗಡೆ ಮಾಡಿತು.
ಭಾರತದ ವಾಯುಪಡೆಯು ಫೆ. 26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಷ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಮರುದಿನ ಪಾಕಿಸ್ತಾನದ 24 ಎಫ್‌ 16 ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯನ್ನು ಭಾರತದ ವಾಯುಪಡೆಯು ಎಂಟು ಮಿಗ್‌ 21 ವಿಮಾನಗಳು ಹಿಮ್ಮೆಟ್ಟಿಸಿದ್ದವು. ಈ ಪ್ರಯತ್ನದಲ್ಲಿ ಭಾರತೀಯ ವಾಯುಸೇನೆಯ ಪೈಲಟ್‌ ಅಭಿನಂದನ್‌  ವರ್ಧಮಾನ್ ಇದ್ದ ವಿಮಾನ ಪತನವಾಗಿತ್ತು. ಅವರು ಪ್ಯಾರಾಚೂಟ್ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು. ಅಂತೆಯೇ ಅವರನ್ನು ಪಾಕಿಸ್ತಾನದ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಇದು ದೇಶಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಅಭಿನಂದನ್‌ ಅವರನ್ನು ಪಾಕಿಸ್ತಾನದಿಂದ ಭಾರತಕ್ಕೆ ಬಹುಬೇಗ ಕರೆಸಿಕೊಳ್ಳಬೇಕು ಎಂಬ ಅಭಿಯಾನ ದೇಶಾದ್ಯಂತ ನಡೆದಿತ್ತು. ಅದರಂತೆ ಭಾರತದ ರಾಜತಾಂತ್ರಿಕ ನಿಯೋಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿತ್ತು. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್‌ ಖಾನ್‌ ಸಂಸತ್‌ನಲ್ಲಿ ಅಭಿನಂದನ್‌ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.
ಇದರ ಫಲವಾಗಿ ಅಭಿನಂದನ್‌ ಅವರು ತಾಯಿ ನಾಡಿಗೆ ಶುಕ್ರವಾರ ಮರಳಿದ್ದರು. ಅಭಿನಂದನ್‌ ಪಾಕಿಸ್ತಾನದಲ್ಲಿ ಭಾರತಕ್ಕೆ ಯಾವುದೇ ದಕ್ಕೆಯಾಗದಂತೆ ಹಾಗೂ ಯಾವುದೇ ಸೇನೆಯ ಕುರಿತಾದ ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಲ್ಲೂ ಕೂಡ ಭಾರತದ ಪರ ಜೈಕಾರ ಹಾಕಿದ್ದರು. ಅವರ ಶೌರ್ಯ, ಧೈರ್ಯ ಹಾಗೂ ದೇಶಪ್ರೇಮ ಭಾರತದ ಜತೆ ಪಾಕಿಸ್ತಾನಕ್ಕೂ ಅವರು ಮಾದರಿಯಾದರು. ಶುಕ್ರವಾರ ದೇಶಾದ್ಯಂತ ಜನತೆ ಅವರನ್ನು ಸ್ವಾಗತಿಸಲು ಕಾಯುತ್ತಿತ್ತು. ಬಿಸಿಸಿಐ ಪುರುಷ ಹಾಗೂ ಮಹಿಳಾ ತಂಡಗಳಿಗೆ ನೂತನ ಪೋಷಾಕು ಬಿಡುಗಡೆ ಮಾಡಿತು. ಹಾಗಾಗಿ, “ವಿಂಗ್‌ ಕಮಾಂಡರ್‌ ಅಭಿನಂದನ್” ಹೆಸರಿನ ಒಂದನೇ ಸಂಖ್ಯೆಯ ಪೋಷಾಕನ್ನು ಬಿಸಿಸಿಐ ಹೈದರಾಬಾದ್‌ನಲ್ಲಿ ಬಿಡುಗಡೆಗೊಳಿಸಿತು.

About the author

ಕನ್ನಡ ಟುಡೆ

Leave a Comment