ಕ್ರೀಡೆ

ವಿಂಡೀಸ್ ವಿರುದ್ಧ ಪಾಕ್‌ಗೆ ಸರಣಿ ಗೆಲುವಿನ ಸಿಹಿ

ಕರಾಚಿ:  ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ 82 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಪಾಕಿಸ್ತಾನ, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಕರಾಚಿ ರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಇದು ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕ್ ದಾಖಲಿಸುತ್ತಿರುವ ಗರಿಷ್ಠ ಮೊತ್ತವಾಗಿದೆ. ಬಾಬರ್ ಅಜಾಮ್ ಕೇವಲ ಮೂರು ರನ್ ಅಂತರದಲ್ಲಿ ಚೊಚ್ಚಲ ಟಿ-20 ಶತಕ ಮಿಸ್ ಮಾಡಿಕೊಂಡಿದ್ದರು. 58 ಎಸೆತಗಳನ್ನು ಎದುರಿಸಿದ ಬಾಬರ್ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 97 ರನ್ ಗಳಿಸಿ ಅಜೇಯರಾಗುಳಿದಿದ್ದರು. ಅತ್ತ ಹುಸೇನ್ ತಲತ್ 41 ಎಸೆತಗಳಲ್ಲಿ 63 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು. ಇವರಿಬ್ಬರು ದ್ವಿತೀಯ ವಿಕೆಟ್‌ಗೆ 119 ರನ್‌ಗಳ ಜತೆಯಾಟ ಕಟ್ಟಿದ್ದರು.

About the author

ಕನ್ನಡ ಟುಡೆ

Leave a Comment