ರಾಜ್ಯ ಸುದ್ದಿ

ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ವಿರೂಪಾಕ್ಷ ಬಜಾರ್ ಮರುನಿರ್ಮಾಣಕ್ಕೆ ಕೈಜೋಡಿಸಿದ ಎಎಸ್ಐ, ಐಐಎಸ್’ಸಿ

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿಯಲ್ಲಿ ಜನರ ಕಣ್ಮನ ಸೆಳೆಯುತ್ತಿದ್ದ ವಿರೂಪಾಕ್ಷ ಬಜಾರ್’ನ್ನು ಮರು ನಿರ್ಮಾಣ ಮಾಡಲು ಭಾರತೀಯ ಪುರಾತತ್ವ ಸಮೀಕ್ಷೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಕೈಜೋಡಿಸಿವೆ.
ವಿರೂಪಾಕ್ಷ ಬಜಾರ್ ಮರು ನಿರ್ಮಾಣಕ್ಕಾಗಿ ಭಾರತೀಯ ಪುರಾತತ್ವ ಸಮೀಕ್ಷೆಯು ಇದೇ ಮೊದಲ ಬಾರಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಗಳನ್ನು ಪಡೆದುಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಮರು ನಿರ್ಮಾಣ ಕಾರ್ಯಕ್ಕೆ ಐಐಎಸ್ಸಿ ಕೂಡ ಕೈಜೋಡಿಸಿದೆ. ವಿರೂಪಾಕ್ಷ ಬಜಾರ್ ನಲ್ಲಿದ್ದ ಮಂಟಪಗಳನ್ನು ಹಿಂದಿನಂತೆಯೇ ಮರು ನಿರ್ಮಾಣ ಮಾಡಲಾಗುತ್ತದೆ. ಪುರಾತತ್ತವ ಶಾಸ್ತ್ರಜ್ಞ ಎಂ.ಕಾಳಿಮುತ್ತು ಅವರು ಹೇಳಿದ್ದಾರೆ. ವಿರೂಪಾಕ್ಷ ಬಜಾರ್ ಮರು ನಿರ್ಮಾಣ ಮಾಡುವ ಕುರಿತು ಭಾರತೀಯ ಪುರಾತತ್ವಕ್ಕೆ 2015ರಲ್ಲಿಯೇ ಪ್ರಸ್ತಾವನೆ ಬಂದಿತ್ತು ಎಂದು ತಿಳಿಸಿದ್ದಾರೆ.
ಹಂಪಿ ವಿಶ್ವವಿಖ್ಯಾತಿ ಪಡೆದುಕೊಂಡಿರುವ ಪ್ರದೇಶವಾಗಿದ್ದು, ಅದ ನೈಜತೆಯನ್ನು ಕಾಪಾಡಲು ಎಎಸ್ಐ ನಿರ್ಧರಿಸಿದೆ. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿದ್ದ ರೀತಿಯಲ್ಲಿಯೇ ಮಂಟಪಗಳನ್ನು ನಿರ್ಮಾಣ ಮಾಡಲಾಗುತ್ತದೆ. ಹೊಸ ಹೊಸ ವಸ್ತುಗಳನ್ನು ನಾವು ಬಳಕೆ ಮಾಡುವುದಿಲ್ಲ. ಸಿಮೆಂಟ್ ಹಾಗೂ ಆಧುನಿಕ ಯುಗದ ಯಾವುದೇ ವಸ್ತುಗಳನ್ನು ಇಲ್ಲಿ ಬಳಕೆ ಮಾಡುವುದಿಲ್ಲ. ಮರು ನಿರ್ಮಾಣ ಕಾರ್ಯ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಮೊದಲು ಹೇಗೆ ನಿರ್ಮಾಣ ಮಾಡಲಾಗಿತ್ತೋ ಅದೇ ರೀತಿ ಮಂಟಪಗಳನ್ನೂ ಮರು ನಿರ್ಮಾಣ ಮಾಡಲಾಗುತ್ತದೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment