ರಾಜ್ಯ ಸುದ್ದಿ

ವಿಜಯಪುರದಲ್ಲಿ 24 ಅಕ್ರಮ ಬಾಂಗ್ಲಾ ನುಸುಳುಕೋರರ ಗಡಿಪಾರು

ವಿಜಯಪುರ: ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ 24 ಅಕ್ರಮ ವಲಸಿಗರನ್ನು ವಿಜಯಪುರ ಪೋಲೀಸರು ಅವರ ದೇಶಕ್ಕೆ ಗಡಿಪಾರು ಮಾಡಿದ್ದಾರೆ. ಅಕ್ರಮವಾಗಿ ವಿಜಯಪುರದಲ್ಲಿ ನೆಲೆಸಿದ್ದ 24 ಬಾಂಗ್ಲಾದೇಶೀಯರನ್ನು ಪೋಲೀಸರು 2016ರ ಡಿಸೆಂಬರ್ ನಲ್ಲಿ ಬಂಧಿಸಿದ್ದರು. ಅದರಿಂದಾಚೆಗೆ ಬಾಂಗ್ಲಾ ರಾಯಭಾರ ಕಛೇರಿಯೊಡನೆ ನಿರಂತರ ಸಂಪರ್ಕ ಸಾಧಿಸಿದ್ದ ಪೋಲೀಸರು ಅಂತಿಮವಾಗಿ ನುಸುಳುಕೋರರನ್ನು ಅವರ ರಾಷ್ಟ್ರಕ್ಕೆ ಗಡಿಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಾಗಲೇ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇವರುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಗುರುವಾರ ಹೈದರಾಬಾದ್ ಮುಖಾಂತರ ಅವರ ರಾಷ್ಟ್ರಕ್ಕೆ ಹಸ್ತಾಂತರಿಸಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment