ರಾಜ್ಯ ಸುದ್ದಿ

ವಿಜಯಪುರ: ಭಾರತ ವಿಕಾಸ ಸಂಗಮದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ವಿಜಯಪುರ: ಐತಿಹಾಸಿಕ ನಗರಿ ವಿಜಯಪುರದ ಕಗ್ಗೋಡದಲ್ಲಿ ಡಿ.24 ರಿಂದ ಡಿ.31ರ ವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಮತ್ತು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ವಿಜಯಪುರ ನಗರದ ಸೋಲಾಪುರ ರಸ್ತೆಯ ಬೈಪಾಸ್ ಬಳಿ‌ ವಿಶ್ವಗುರು ಬಸವೇಶ್ವರರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಶೋಭಾ ಯಾತ್ರೆಯಲ್ಲಿ ವಿಜಯಪುರ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಸೇರಿದಂತೆ ಅನೇಕ‌ ಮಠಾಧೀಶರು ಹಾಗೂ ಗಣ್ಯರು‌ ಭಾಗಿಯಾಗಿದ್ದಾರೆ.

ಶೋಭಾಯಾತ್ರೆಯಲ್ಲಿ 150 ಕ್ಕೂ ಹೆಚ್ಚು ಕಲಾತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದ್ದು, 101 ಕರಡಿ ಮಜಲು, 101 ಡೊಳ್ಳು ಕುಣಿ, ಹಲಗೆ ಮಜಲು, ಚೌಡಕಿ ಮೇಳ, ಲಂಬಾಣಿ ನೃತ್ಯ, ಸುಡುಗಾಡು ಸಿದ್ಧರ ನೋಟ, ನವೀನ ಮಾದರಿ ಹೆಜ್ಜೆ ಮೇಳ, ಸಂಬಾಳ ವಾದನ, ಕುದುರೆ ಕುಣಿತ, ತಾಸೆ ವಾದನ, ಗಾರುಡಿ ಗೊಂಬೆ, ದೊಡ್ಡಾಟ, ಕುಂಭ ಮೇಳ, ವಿವಿಧ ಸ್ತಬ್ಧ ಚಿತ್ರಗಳು ಅನಾವರಣಗೊಳ್ಳುತ್ತಿದೆ.

ಡಿ. 25ರಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ 1 ಲಕ್ಷ ಮಾತೆಯರಿಂದ ಮಕ್ಕಳಿಗೆ ಕೈತುತ್ತು ತಿನ್ನಿಸುವ ಮಾತೃಸಂಗಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

About the author

ಕನ್ನಡ ಟುಡೆ

Leave a Comment