ದೇಶ ವಿದೇಶ

ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ

ಲಂಡನ್: ದೇಶ ಭ್ರಷ್ಟ, ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ.
ವಿಜಯ್ ಮಲ್ಯ ಗಡಿಪಾರು ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಲಂಡನ್ ನ  ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿದ್ದು ಗಡಿಪಾರು ಮಾಡಲು ಆದೇಶ ನೀಡಿದೆ. ವಿಜಯ್ ಮಲ್ಯ ಗಡಿಪಾರು ಮಾಡಲು ಬ್ರಿಟನ್ ಕೋರ್ಟ್ ಆದೇಶ ನೀಡಿರುವುದರ ಬಗ್ಗೆ ಸಿಬಿಐ ವಕ್ತಾರರು ಪ್ರತಿಕ್ರಿಯೆ ನೀಡಿದ್ದು “ಮಲ್ಯ ಅವರನ್ನು ಭಾರತಕ್ಕೆ ಕರೆತಂದು ಶೀಘ್ರವೇ ಪ್ರಕರಣವನ್ನು ಇತ್ಯರ್ಥಗೊಳಿಸುತ್ತೇವೆ ಎಂದು ಹೇಳಿದ್ದಾರೆ.  ಬ್ರಿಟನ್ ಕೋರ್ಟ್ ಗಡಿಪಾರಿಗೆ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಮಲ್ಯಗೆ 14 ದಿನಗಳ ಕಾಲಾವಕಾಶ ಇದ್ದು ಒಂದು ವೇಳೆ ಮೇಲ್ಮನವಿ ಸಲ್ಲಿಸದೇ ಇದ್ದಲ್ಲಿ  28 ದಿನಗಳಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮಲ್ಯ ಅವರನ್ನು ಗಡಿಪಾರು ಮಾಡಬಹುದಾಗಿದೆ.

About the author

ಕನ್ನಡ ಟುಡೆ

Leave a Comment