ದೇಶ ವಿದೇಶ

ವಿಜಯ್ ಮಲ್ಯ ಲಂಡನ್ ನಿವಾಸ ಜಪ್ತಿ ಮಾಡಲು ಕೋರ್ಟ್ ಅಸ್ತು

ಲಂಡನ್: ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಯುನೈಟೆಡ್ ಬ್ಯಾಂಕ್ ಆಫ್ ಸ್ವಿಜರ್ ಲ್ಯಾಂಡ್(ಯುಬಿಎಸ್) ಮದ್ಯದ ದೊರೆಯ ಐಷಾರಾಮಿ ಲಂಡನ್ ನಿವಾಸ ಜಪ್ತಿ ಮಾಡಲು ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ವಿಜಯ್ ಮಲ್ಯ ಅವರು ಯುಬಿಎಸ್ ಬ್ಯಾಂಕ್ ನಿಂದ 20. 4 ಮಿಲಿಯನ್ ಪೌಂಡ್ ಸಾಲ ಪಡೆದಿದ್ದು, ಅದನ್ನು ಮರು ಪಾವತಿಸದ ಹಿನ್ನೆಲೆಯಲ್ಲಿ ಕೇಂದ್ರ ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಕಾರ್ನಾಲ್ ಟೆರೇಸ್ ಅನ್ನು ಜಪ್ತಿ ಮಾಡಲು ಅನುಮತಿ ನೀಡುವಂತೆ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್, ಮಲ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮನೆ ವಶಪಡಿಸಿಕೊಳ್ಳಲು ಅನುಮತಿ ನೀಡಿ, ವಿಚಾರಣೆಯನ್ನು ಮುಂದಿನ ವರ್ಷ ಮೇನಲ್ಲಿ ನಿಗದಿಪಡಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಯುಬಿಎಸ್ ಬ್ಯಾಂಕ್, ಕೋರ್ಟ್ ನಿರ್ಧಾರದಿಂದ ಸಂತಸವಾಗಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವುದರಿಂದ ಹೆಚ್ಚು ಮಾಹಿತಿ ನೀಡುವುದು ಸೂಕ್ತವಲ್ಲ ಎಂದಿದೆ.

About the author

ಕನ್ನಡ ಟುಡೆ

Leave a Comment