ಸಿನಿ ಸಮಾಚಾರ

ವಿದೇಶಕ್ಕೆ ತೆರಳಿದ್ದ ಚಾಲೆಂಜಿಂಗ್ ಸ್ಟಾರ್: ಕಂಠೀರವ ಸ್ಟೇಡಿಯಂನಲ್ಲಿ ಅಂಬಿ ದರ್ಶನ ಮಾಡಿದ ದರ್ಶನ್​

ಬೆಂಗಳೂರು: ಚಲನಚಿತ್ರವೊಂದರ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಬೆಳಗ್ಗೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದು, ಅಂಬರೀಷ್​ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಕಂಠೀರವ ಸ್ಟೇಡಿಯಂಗೆ ಆಗಮಿಸಿ ದರ್ಶನ ಪಡೆದಿದ್ದಾರೆ. ಶನಿವಾರವಷ್ಟೇ ನಟ ಅಂಬರೀಷ್‌ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಚಲನಚಿತ್ರ ರಂಗದ ಬಹುತೇಕರು ನಿನ್ನೆಯಷ್ಟೇ ಅಂಬಿಯ ಅಂತಿಮ ದರ್ಶನ ಪಡೆದಿದ್ದರು. ಆದರೆ, ನಟ ದರ್ಶನ್‌ಗೆ ಮಾತ್ರ ಅದು ಸಾಧ್ಯವಾಗಿರಲಿಲ್ಲ.

ಯಜಮಾನ ಚಿತ್ರದ ಶೂಟಿಂಗ್​ಗೆ ಸ್ವೀಡನ್​ಗೆ ತೆರಳಿದ್ದ ನಟ ದರ್ಶನ್‌ ಅವರಿಗೆ ಅಂಬಿ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಶೂಟಿಂಗ್ ಸ್ಥಗಿತಗೊಳಿಸಿ ಇಲ್ಲಿಗೆ ತೆರಳಲು ಸಿದ್ಧರಾಗಿದ್ದರು ಆದರೆ ಮೊನ್ನೆ ರಾತ್ರಿ ಟಿಕೆಟ್ ಸಮಸ್ಯೆಯಿಂದ ಪರದಾಡುವಂತಾಗಿತ್ತು.

ಬಳಿಕ ಸ್ವೀಡನ್​ನಿಂದ ದುಬೈಗೆ ಬಂದು ಮಧ್ಯ ರಾತ್ರಿ 2 ಗಂಟೆಯಲ್ಲಿ ದುಬೈನಿಂದ ಹೊರಟು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ್ದರು. ಮಂಡ್ಯದಿಂದ ನೇರವಾಗಿ ಮೊದಲು ಕಂಠೀರವ ‌ಸ್ಟೇಡಿಯಂಗೆ ಪಾರ್ಥಿವ ಶರೀರ ಬರುವ ಕಾರಣದಿಂದಾಗಿ ದರ್ಶನ್ ನೇರವಾಗಿ ಕಂಠೀರವ ಸ್ಟೇಡಿಯಂ ತಲುಪಿದ್ದರು.

About the author

ಕನ್ನಡ ಟುಡೆ

Leave a Comment