ಸುದ್ದಿ

ವಿದ್ವತ್​ ಸ್ಥಿತಿ ನೋಡಿ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಕಂಬನಿ ​

ಬೆಂಗಳೂರು: ಶಾಂತಿನಗರ ಶಾಸಕ ಎನ್​.ಎ. ಹ್ಯಾರಿಸ್​ ಪುತ್ರ ಮಹಮ್ಮದ್​ ನಲಪಾಡ್​ನಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್​ರನ್ನು ಮಂಗಳವಾರ ಮಧ್ಯಾಹ್ನ ಮಲ್ಯ ಆಸ್ಪತ್ರೆಗೆ ತೆರಳಿ ಪುನೀತ್​ ರಾಜ್​ಕುಮಾರ್​ ವಿದ್ವತ್ರನ್ನು​ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸ್ಥಿತಿಯನ್ನು ಕಂಡು ಅಪ್ಪು ಕಣ್ಣೀರು ಹಾಕಿದ್ದಾರೆ.

ವಿದ್ವತ್​ ನಮ್ಮ ಫ್ಯಾಮಿಲಿ ಫ್ರೆಂಡ್​. ಆತನನ್ನು ನಾನು ಚಿಕ್ಕವನಿಂದ ನೋಡಿದ್ದೀನಿ, ಆತ ನನ್ನ ತಮ್ಮನ ಹಾಗೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಪುನೀತ್​ ರಾಜ್​ಕುಮಾರ್​ ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment