ರಾಷ್ಟ್ರ

ವಿಮಾನ ನಿಲ್ದಾಣ ಬಳಿ ಗಾಳಿಪಟ, ಆಕಾಶ ಬುಟ್ಟಿಗಳಿಗೆ ನಿಷೇಧ

ವಿಮಾನ ನಿಲ್ದಾಣಗಳ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಆಕಾಶಬುಟ್ಟಿ, ಶುಭಾಶಯ ಕೊರುವ ಗಾಳಿಪಟ ಹಾರಿಸುವುದನ್ನು ನಿಷೇಧಿಸಲು ನಾಗರಿಕ ವಿಮಾನಯಾನ ಸಚಿವಾಲಯ ಚಿಂತಿಸಿದೆ. – ಇವುಗಳಿಂದ ಪೈಲಟ್‌ಗಳಿಗೆ – ಮಾತ್ರವಲ್ಲದೆ, ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಲಿದೆ. ಹೀಗಾಗಿ ಈಗಿರುವ ವಿಮಾನ ಸಂಚಾರ ನಿಯಮಗಳಿಗೆ ಶೀಘ್ರವೇ ತಿದ್ದುಪಡಿ ತರಲು ಉದ್ದೇಶಿಸಿದೆ.

ಈ ಗಾಳಿಪಟ ಹಾರಿಸುವುದರಿಂದ ವಿಮಾನನಿಲ್ದಾಣದ ಕಾರ್ಯಾಚರಣೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಆಕಾಶಬುಟ್ಟಿ ಹಾರಿಸಿರುವುದು ಕಂಡುಬಂದಿದೆ. ಈ ದೀಪಗಳು ವಿಮಾನಗಳಿಗೆ ಅಪಾಯ ಉಂಟು ಮಾಡಬಹುದು. ಈ ಕಾರಣಕ್ಕೆ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment