ರಾಜಕೀಯ

ವಿರೋಧಿ ಅಲೆಯಿದೆ: ಸಚಿವ ಆಂಜನೇಯಗೆ ಬೆವರಿಳಿಸಿದ ಸಿಎಂ, ಪರಂ

ಬೆಂಗಳೂರು: ,”ಏನಪ್ಪ ನಿನಗೆ ಇಷ್ಟು ಮುಖ್ಯವಾದ ಖಾತೆ ಕೊಟ್ಟರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲೂ ಪಕ್ಷಕ್ಕೆ ಶಕ್ತಿ ತುಂಬಿಲ್ಲ. ಎಲ್ಲರೂ ನಿನ್ನ ವಿರುದ್ಧವಿದ್ದಾರೆ. ನಿನ್ನ ಕ್ಷೇತ್ರದಲ್ಲೇ ವಿರೋಧಿ ಅಲೆಯಿದೆ…

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಆಲಿಸುವಾಗ ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಅವರಿಗೆ ಸಿಎಂ ಸಿದ್ದರಾಮಯ್ಯ ಸರಿಯಾಗಿ ಬೆವರಿಳಿಸಿದ್ದಾರೆ.
ಇದಕ್ಕೆ ಸಮಜಾಯಿಷಿ ಕೊಡಲು ಆಂಜನೇಯ ಮುಂದಾದರೂ ಸಿಎಂ ಬಿಡಲಿಲ್ಲ. ”ಇಷ್ಟು ದಿನ ಆದದ್ದು ಆಗಿ ಹೋಯಿತು. ಈಗಲಾದರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡುವುದನ್ನು ಕಲಿ. ಕ್ಷೇತ್ರಕ್ಕೆ ತೆರಳಿ ವಾಸ್ತವವೇನಿದೆ ಎಂದು ಅರ್ಥ ಮಾಡಿಕೋ,” ಎಂದು ತಾಕೀತು ಮಾಡಿದರು ಎಂದು ತಿಳಿದು ಬಂದಿದೆ.

ಸದಾಶಿವ ಆಯೋಗದ ವರದಿ ವಿಚಾರವಾಗಿಯೂ ಪ್ರಸ್ತಾಪಿಸಿದ ಮುಖ್ಯಮಂತ್ರಿ, ”ಒಳ ಮೀಸಲು ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ನಿನ್ನ ಮೂಗಿನ ನೇರಕ್ಕೆ ತಕ್ಕಂತೆ ಹೇಳಿಕೆ ಕೊಡಬೇಡ. ಇದರಿಂದ ಇಡೀ ಪಕ್ಷಕ್ಕೆ ಹಾನಿಯಾಗುತ್ತದೆ. ಅದನ್ನು ನಾವು ನೋಡಿಕೊಳ್ಳುತ್ತೇವೆ,” ಎಂದು ಖಡ್‌ಕ್‌ ಸೂಚನೆ ಕೊಟ್ಟರು.

About the author

ಕನ್ನಡ ಟುಡೆ

Leave a Comment