ಕ್ರೀಡೆ

ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಿಂದ ಪಾಕಿಸ್ತಾನ ಬ್ಯಾನ್‌ ಬಿಸಿಸಿಐ ಹೇಳಿದ್ದೇನು

ಮುಂಬೈ: ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಬೇಡ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದ್ದು, ಈ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು, ‘ಬಿಸಿಸಿಐ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸುಪ್ರೀಂ ಕೋರ್ಟ್ ನೇಮಿತ ಆಡಳಿತಗಾರರ ಸಮಿತಿ (ಸಿಒಎ) ಈ ಸಂಬಂಧ ಶಶಾಂಕ್ ಮನೋಹರ್ ಗೆ ಪತ್ರದ ಕರಡು ಪ್ರತಿ ರೆಡಿ ಮಾಡಿದ್ದು ಐಸಿಸಿಗೆ ಮನವಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೆ, ಐಸಿಸಿಗೆ ಮಾಹಿತಿ ನೀಡುವ ಬಗ್ಗೆ ಸಿಒಎ ಮುಖ್ಯಸ್ಥ ವಿನೋದ್ ರಾಯ್ ಈ ಸಂಬಂಧ ಕಾನೂನು ಸಮಾಲೋಚನೆಗಳನ್ನು ಪಡೆದ ಬಳಿಕ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಯ್‌ ಒಪ್ಪಿಗೆ ಪಡೆದು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಕಚೇರಿಯಲ್ಲಿ ಈ ಕರಡು ಪತ್ರೆವನ್ನು ರೆಡಿ ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿ ಬಳಿಕ, ವಿಶ್ವಕಪ್ ಸರಣಿಯಿಂದ ಪಾಕಿಸ್ತಾನ ತಂಡವನ್ನು ಬ್ಯಾನ್ ಮಾಡಬೇಕೆಂದು ಬಿಸಿಸಿಐ ಅಭಿಪ್ರಾಯ ಪಟ್ಟಿದ್ದು, ಈ ಕುರಿತು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಐಸಿಸಿಗೆ ಪತ್ರ ಕಳಿಸುವ ಬಗ್ಗೆ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆದರೆ ಐಸಿಸಿಗೆ ಈ ಬಗ್ಗೆ ಯಾವುದೇ ಮೌಖಿಕ ಅಥವಾ ಅನಧಿಕೃತ ಸಂವಹನವನ್ನು ಬಿಸಿಸಿಐ ನೀಡಿಲ್ಲ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment