ಕ್ರೀಡೆ

ವಿಶ್ವಕಪ್ ನಲ್ಲಿ ಬದ್ಧವೈರಿ ಪಾಕ್ ಗೆ 2 ಅಂಕ ನೀಡಲು ಇಷ್ಟವಿಲ್ಲ: ಸಚಿನ್ ತೆಂಡೂಲ್ಕರ್

ನವದೆಹಲಿ: ಭಾರತ – ಪಾಕ್ ಪಂದ್ಯದ ಪರ ಬ್ಯಾಟಿಂಗ್ ಮಾಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ಮುಂಬರುವ ವಿಶ್ವಕಪ್ ನಲ್ಲಿ ಬದ್ಧವೈರಿ ಪಾಕಿಸ್ತಾನಕ್ಕೆ ಸುಲಭವಾಗಿ ಎರಡು ಅಂಕಗಳನ್ನು ನೀಡಲು ಇಷ್ಟಪಡುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಆಡಿ ಗೆಲ್ಲಬೇಕಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಪಾಕ್ ವಿರುದ್ಧ ಸೋತ್ತಿಲ್ಲ. ಇಂದು ಅವರನ್ನು ಮತ್ತೊಮ್ಮೆ ಸೋಲುಣಿಸುವ ಸಮಯ ಬಂದಿದೆ. ಪಂದ್ಯ ಆಡದಿರುವುದರಿಂದ ಅವರಿಗೆ 2 ಅಂಕಗಳು ನೀಡಿ ಪಾಕ್ ತಂಡಕ್ಕೆ ಸಹಾಯ ಮಾಡುವುದನ್ನು ವೈಯಕ್ತಿಕವಾಗಿ ವಿರೋಧಿಸುತ್ತೇನೆ ಎಂದು ಸಚಿನ್ ತೆಂಡೂಲ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೇಳಿಕೆ ವಿವಾದವಾಗುತ್ತಿದ್ದಂತೆ ಸಚಿನ್, ನನಗೆ ಮೊದಲು ದೇಶವೇ ಮುಖ್ಯವಾಗಿದ್ದು, ನನ್ನ ದೇಶ ಏನು ನಿರ್ಧಾರ ಮಾಡುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಪಾಕಿಸ್ತಾನ ವಿರುದ್ದದ ಪಂದ್ಯ ಬಹಿಷ್ಕರಿಸುವುದು ಸೂಕ್ತವಲ್ಲ ಎಂದಿದ್ದರು. ಇದೀಗ ಸಚಿನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ಧದ ಯಾವುದೇ ವ್ಯವಹಾರಕ್ಕೂ ಭಾರತ ಸಿದ್ಧವಿಲ್ಲ. ಹೀಗಾಗಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯ ಬಹಿಷ್ಕರಿಸುವಂತೆ ಒತ್ತಾಯ ಕೇಳಿಬುರುತ್ತಿದೆ.

About the author

ಕನ್ನಡ ಟುಡೆ

Leave a Comment