ದೇಶ ವಿದೇಶ

ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗ ನಿಧನ

ನೈರೋಬಿ: ಕಿನ್ಯಾದಲ್ಲಿದ್ದ ವಿಶ್ವದ ಅಪರೂಪದ ಕೊನೆಯ ಗಂಡು ಬಿಳಿ ಘೇಂಡಾಮೃಗ  ಮಾ.20 ರಂದು ಮೃತಪಟ್ಟಿದೆ. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ 45 ವರ್ಷದ ಘೇಂಡಾಮೃಗ “ಸುಡಾನ್” ಅರಣ್ಯದಲ್ಲಿ ಜನಿಸಿದ್ದ ಕೊನೆಯ ಬಿಳಿಯ ಘೇಂಡಾಮೃಗವಾಗಿತ್ತು,

ಬಿಳಿಯ ಘೇಂಡಾಮೃಗಗಳ ಕೊಂಬಿನಿಂದ ಪುರುಷತ್ವ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದ್ದ ಹಿನ್ನೆಲೆಯಲ್ಲಿ ಬಿಳಿಯ ಘೇಂಡಾಮೃಗಗಳನ್ನು ಹೆಚ್ಚು ಬೇಟೆಯಾಡಲಾಗುತ್ತಿತ್ತು. ಪರಿಣಾಮ ಗಂಡು ಬಿಳಿಯ ಘೇಂಡಾಮೃಗಗಳ ಸಂಖ್ಯೆ ಕ್ಷೀಣಿಸಿತ್ತು.

2009ರಲ್ಲಿ ಕಿನ್ಯಾದ ಸಂರಕ್ಷಿತ ಅರಣ್ಯಕ್ಕೆ ಕರೆತರಲಾಗಿದ್ದ ನಂತರ ಮೂರು ಹೆಣ್ಣು ಘೕಂಡಾಮೃಗಗಳೊಂದಿಗೆ ಸುಡಾನ್ ನಲ್ಲಿ ಇರಿಸಲಾಗಿತ್ತು ಅದರೂ ಸಂತಾನೋತ್ಪತ್ತಿ ಸಾಧ್ಯವಾಗಿರಲಿಲ್ಲ. ಈಗ ಮೂರು ಬಿಳಿಯ ಹೆಣ್ಣು ಘೇಂಡಾಮೃಗಗಳು ಇದ್ದು ಬಿಳಿ ಗಂಡು ಘೇಂಡಾಮೃಗಳಿಂದ ಸಂರಕ್ಷಿಸಲಾಗಿರುವ ವೀರ್ಯಾಣುಗಳಿಂದ ಕೃತಕ ಗರ್ಭಧಾರಣೆಗೆ ಪ್ರಯತ್ನಿಸಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment