ರಾಷ್ಟ್ರ ಸುದ್ದಿ

ವಿಶ್ವಸಂಸ್ಥೆಯ ಚಾಂಫಿಯನ್ ಆಪ್ ದಿ ಅರ್ಥ್ ಪ್ರಶಸ್ತಿ ರಾಷ್ಟ್ರಕ್ಕೆ ಸಮರ್ಪಣೆ- ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಿಶ್ವಸಂಸ್ಥೆಯು ನೀಡುವ ‘ ಚಾಂಫಿಯನ್ ಆಪ್ ದಿ ಅರ್ಥ್ ಪ್ರಶಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ವಿಶ್ವಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಪ್ರಶಸ್ತಿ ವೈಯಕ್ತಿಕವಾಗಿ ಬಂದಿಲ್ಲ ಆದರೆ, ಶತಮಾನಗಳ ಮೂಲಕ ಬಂದಿರುವ  ಭಾರತದ ದೊಡ್ಡ ಸಂಪ್ರದಾಯ , ಪ್ರಕೃತಿಯೊಂದಿಗೆ ಸಹಜೀವನದಂತಹ ಚಿಂತನಾ ಮೌಲ್ಯಗಳಿಂದ ಬಂದಿರುವುದಾಗಿ ಮೋದಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಮನು ಕುಲವು ಪ್ರಕೃತಿಯ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳಲು ಆರಂಭಿಸಿದೆ” ಎಂದು ಹೇಳಿರುವ ಪ್ರಧಾನಿ ಪ್ರಕೃತಿ ರಕ್ಷಣೆಯಲ್ಲಿ ಎಲ್ಲರೂ ಸಂತೋಷಪಡಬೇಕು ಎಂದು ಸಲಹೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment