ದೇಶ ವಿದೇಶ

ವಿಶ್ವ ಪ್ರವಾಸಿ ಮೇಳದಲ್ಲಿ ಭಾರತ ಉತ್ತಮ ಪ್ರದರ್ಶಕ ಪ್ರಶಸ್ತಿ .

ಜರ್ಮನಿಯ ಐಟಿಬಿ ಬರ್ಲಿನ್‍ನಲ್ಲಿ ನಡೆದ ವಿಶ್ವ ಪ್ರವಾಸಿ ಮೇಳದಲ್ಲಿ ಭಾರತ ಉತ್ತಮ ಪ್ರದರ್ಶಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಶ್ವದ ಪ್ರತಿ ಮೂಲೆಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ದೇಶಗಳು ಈ ಮೆಗಾ ಮೇಳದಲ್ಲಿ ಭಾಗವಹಿಸಿದ್ದವು. ಎಲ್ಲ ದೇಶಗಳ ಪ್ರವಾಸೋದ್ಯಮ ಸಚಿವರು ಕೂಡಾ ವಿಶ್ವ ಪ್ರವಾಸಿ ಮೇಳದಲ್ಲಿ ಪಾಲ್ಗೊಂಡಿದ್ದರು. ಭಾರತದ ಇನ್‍ಕ್ರೆಡಿಬಲ್ ಇಂಡಿಯಾ (ಭಾರತದ ಪ್ರವಾಸೋದ್ಯಮ ಸಚಿವಾಲಯ), ಯೋಗಿ ಆಫ್ ದ ರೇಸ್‍ಟ್ರ್ಯಾಕ್ ಎಂಬ ಕಿರುಚಿತ್ರವನ್ನು ಪ್ರಸ್ತುತಪಡಿಸಿತ್‍ತು. ಈ ಕಿರು ಚಿತ್ರಕ್ಕೆ 60 ಗಂಟೆಗಳಲ್ಲಿ 32 ಲಕ್ಷ ಹಿಟ್‍ಗಳು ಬಂದು ದಾಖಲೆ ನಿರ್ಮಿಸಿದವು.

ಐಟಿಬಿ ಬರ್ಲಿನ್ ಕುರಿತು

ಐಟಿಬಿ ಬರ್ಲಿನ್ (ಇಂಟರ್‍ನ್ಯಾಷನಲ್ ಟೂರಿಸಮ್ ಬೋರ್ಸ್- ಬರ್ಲಿನ್) ವಿಶ್ವದ ಅತಿದೊಡ್ಡ ಪ್ರವಾಸೋದ್ಯಮ ಮೇಳವಾಗಿದೆ. ಇದರಲ್ಲಿ ಹೋಟೆಲ್‍ಗಳು, ಪ್ರವಾಸಿ ಮಂಡಳಿಗಳು, ಪ್ರವಾಸಿ ಆಪರೇಟರ್‍ಗಳು, ವ್ಯವಸ್ಥೆಗಳನ್ನು ಒದಗಿಸುವವರು, ಏರ್‍ಲೈನ್ಸ್ ಮತ್ತು ಕಾರು ಬಾಡಿಗೆಗೆ ನೀಡುವ ಕಂಪನಿಗಳು ಈ ಬೃಹತ್ ಮೇಳದಲ್ಲಿ ಪಾಲ್ಗೊಳ್ಳುತ್ತವೆ. ಈ ಮೇಳವು ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ಮೆಸ್ಸೆ ಬರ್ಲಿನ್‍ನಲ್ಲಿ ನಡೆಯುತ್ತದೆ.

About the author

Pradeep Kumar T R

Leave a Comment