ಕ್ರೀಡೆ

ವಿಶ್ವ ವಿಶೇಷ ಒಲಿಂಪಿಕ್: ಭಾರತದ ಮಡಿಲಿಗೆ 368 ಪದಕ

ನವದೆಹಲಿ: ಅಬು ಧಾಬಿಯಲ್ಲಿ ನಡೆದ ವಿಶ್ವ ವಿಶೇಷ ಒಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಕ್ರೀಡಾಪಟುಗಳು 85 ಚಿನ್ನ, 154 ಬೆಳ್ಳಿ ಹಾಗೂ 129 ಕಂಚಿನ ಪದಕಗಳನ್ನು ಜಯಿಸುವ ಮೂಲಕ ಭಾರತಕ್ಕೆ ಒಟ್ಟು 368 ಪದಕಗಳನ್ನು ತಂದುಕೊಟ್ಟಿದ್ದಾರೆ.
ಪವರ್ ಲಿಫ್ಟಿಂಗ್ ನಲ್ಲಿಯೇ ಭಾರತಕ್ಕೆ ಅತಿ ಹೆಚ್ಚು ಪದಕಗಳು ಬಂದಿದ್ದು, 20 ಚಿನ್ನ, 33 ಬೆಳ್ಳಿ ಹಾಗೂ  43 ಕಂಚಿನ ಪದಕಗಳು ಸೇರಿ ಒಟ್ಟು 96 ಪದಕಗಳು ಸೇರ್ಪಡೆಗೊಂಡಿವೆ. ರೋಲರ್ ಸ್ಕೇಟಿಂಗ್ ನಲ್ಲಿ 13 ಚಿನ್ನ, 20 ಬೆಳ್ಳಿ ಹಾಗೂ 16 ಕಂಚು ಸಮೇತ ಒಟ್ಟು 49 ಪದಕ ಸಂದಿವೆ. ಸೈಕ್ಲಿಂಗ್ ವಿಭಾಗದಲ್ಲಿ 11 ಚಿನ್ನ, 14 ಬೆಳ್ಳಿ ಹಾಗೂ 20 ಕಂಚು ಸೇರಿ ಒಟ್ಟು 45 ಪದಕಗಳು ದೊರೆತಿವೆ. ಭಾರತವು ಯುನಿಫೈಯಿಡ್ ಹೈಡ್ ಬಾಲ್ ನಲ್ಲಿ 10, ಈಜಿನಲ್ಲಿ 9 ಹಾಗೂ ಬ್ಯಾಡ್ಮಿಂಟನ್ ನಲ್ಲಿ 08 ಮತ್ತು ಟೇಬಲ್ ಟೆನಿಸ್ ನಲ್ಲಿ 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿವೆ. ಅಥ್ಲೆಟಿಕ್ಸ್ ನಲ್ಲಿ 5 ಸ್ವರ್ಣದೊಂದಿಗೆ ಒಟ್ಟು 39 ಪದಕ ಹಾಗೂ ಈಜಿನಲ್ಲಿ 21 ಪದಕ ತನ್ನ ಮುಡಿಗೇರಿಕೊಂಡಿದೆ.

About the author

ಕನ್ನಡ ಟುಡೆ

Leave a Comment