ಸಿನಿ ಸಮಾಚಾರ

ವಿಷ್ಣುವರ್ಧನ್‌ 9 ನೇ ಪುಣ್ಯ ತಿಥಿ: ಅಭಿಮಾನಿಗಳಿಂದ ಪ್ರತಿಭಟನೆ

ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅವರ 9 ನೇ ಪುಣ್ಯ ತಿಥಿಯನ್ನು ಭಾನುವಾರ ಆಚರಿಸಲಾಗುತ್ತಿದ್ದು, ಅಭಿಮಾನಿಗಳು ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ  ಸಮಾಧಿ ಬಳಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಅಭಿಮಾನ್‌ ಸ್ಟುಡಿಯೋ ಬಳಿ ನೂರಾರು ಮಂದಿ ಪ್ರತಿಭಟನಾಕಾರರು ಮುಂದಿನ ವರ್ಷ ಸೆ.18 ರ ಒಳಗೆ ಸರ್ಕಾರ ವಿಷ್ಣು ವರ್ಧನ್‌ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಕೆಲ ಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಸಮಾಧಿ ಬಳಿ ನೂರಾರು ಮಂದಿ ಅಭಿಮಾನಿಗಳು ಆಗಮಿಸಿ ನೆಚ್ಚಿನ ನಾಯಕನಿಗೆ ಗೌರವ ನಮನ ಸಲ್ಲಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಸಕಾರಾತ್ಮಕ  ಪ್ರತಿಕ್ರಿಯೆ ಬಂದಿದೆ: ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಲಿದೆ. ಸಮಾಧಿ ಅಭಿಮಾನ್‌ ಸ್ಟುಡಿಯೋದಲ್ಲೆ ಇರಲಿದೆ, ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು ಅಡಚಣೆಗಳಿವೆ ಎಂದರು.

ಏನು ಹೇಳಿದ್ದೇನೆ ಅದಕ್ಕೆ ಬದ್ಧ : ಭಾರತಿ ವಿಷ್ಣುವರ್ಧನ್‌ ಅವರು ಮಾತನಾಡಿ ನಾನು ಹಿಂದೆ ಏನು ಹೇಳಿದ್ದೇನೋ ಅದಕ್ಕೆ ಬದ್ಧಳಿದ್ದೇನೆ. ಮತ್ತೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

 

About the author

ಕನ್ನಡ ಟುಡೆ

Leave a Comment