ಸುದ್ದಿ

ವಿಷ ಕುಡಿದ ರೌಡಿಶೀಟರ್‌ ನಾಗ!

ಬೆಂಗಳೂರು: ರೌಡಿ ಶೀಟರ್‌ ನಾಗ ಸುದ್ದಿಗೋಷ್ಠಿಯಲ್ಲೇ ವಿಷ ಸೇವನೆ ಮಾಡಿದ ಘಟನೆ ಗುರುವಾರ ನಗರದ ಪ್ರಸ್‌ ಕ್ಲಬ್‌ನಲ್ಲಿ ನಡೆದಿದೆ. ಈ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೌಡಿಶೀಟರ್‌ ಬಾಂಬ್‌ ನಾಗ ಮತ್ತು ಇಬ್ಬರು ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿ ಯನ್ನು  ಶ್ರೀರಾಮಪುರ ಠಾಣೆ ಪೊಲೀಸರು ವಾರದ ಹಿಂದೆ ಬಂಧಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್‌ ಮತ್ತು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡುರಾವ್‌ ಅವರು ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ವಿಷ ಸೇವನೆ ಮಾಡಿದ್ದಾನೆ. ಕೂಡಲೆ ನಾಗನನ್ನು ನೃಪತುಂಗ ರಸ್ತೆಯಲ್ಲಿರುವ ಸೈಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಾಗ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಿದ್ಧತೆ ನಡೆಸಿದ್ದ ಎಂದು ಹೇಳಲಾಗಿದೆ.

ಭಾರೀ ಪ್ರಮಾಣದಲ್ಲಿ ಹಳೇ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡ ಪ್ರಕರಣದಲ್ಲಿ ಕಳೆದ ವರ್ಷ ನಾಗ ಮತ್ತುಪುತ್ರರನ್ನು ವಶಕ್ಕೆ ಪಡೆಯಲಾಗಿತ್ತು. ನಾಗ ತಲೆ ಮರೆಸಿಕೊಂಡು ಪೊಲೀಸರ ನಿದ್ದೆ ಗೆಡಿಸಿ ಭಾರೀ ಸುದ್ದಿಯಾಗಿದ್ದ.

 

About the author

ಕನ್ನಡ ಟುಡೆ

Leave a Comment