ಕ್ರೈಂ

ವಿಷ ಪ್ರಸಾದ: ಸ್ವಾಮೀಜಿಯೇ ವಿಲನ್

ಚಾಮರಾಜ ನಗರ: ರಾಷ್ಟ್ರವ್ಯಾಪಿ ಗಮನ ಸೆಳೆದ ಸುಳವಾಡಿ ವಿಷ ಪ್ರಸಾದ ದುರಂತಕ್ಕೆ ಮಾರಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷನೂ ಆಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಮಹದೇವ ಸ್ವಾಮಿಯೇ ಮುಖ್ಯ ಸಂಚುಕೋರ ಎಂಬುದು ಬಯಲಾಗಿದೆ. ಈತನ ಆದೇಶದಂತೆ ವಿಷವಿಕ್ಕಿದ ಅಂಬಿಕಾ(35), ಈಕೆಯ ಪತಿ ಹಾಗೂ ಟ್ರಸ್ಟ್ ವ್ಯವಸ್ಥಾಪಕ ಮಾದೇಶ (46)ಮತ್ತು ಅರ್ಚಕ ದೊಡ್ಡಯ್ಯ ತಂಬಡಿ (35) ಅವರನ್ನು ಪೊಲೀಸರು ಬಂಧಿಸಿದ್ದಾರೆ. ದೇಗುಲದ ಆದಾಯದ ಮೇಲೆ ಕಣ್ಣಿಟ್ಟಿದ್ದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವ ಸ್ವಾಮಿಯ(52) ದುಷ್ಟ ತಂತ್ರದಿಂದಲೇ 15 ಅಮಾಯಕ ಜೀವಗಳ ಸಾವು ಸಂಭವಿಸಿದೆ ಎಂದು ತನಿಖೆಯಿಂದ ದೃಢಪಟ್ಟಿದೆ. ಘಟನೆಗೆ ಒಂದು ವಾರ ಮುಂಚೆಯೇ ಪ್ರಸಾದದಲ್ಲಿ ವಿಷ ಮಿಶ್ರಣ ಮಾಡುವ ಯೋಜನೆಯನ್ನು ಆರೋಪಿಗಳು ರೂಪಿಸಿದ್ದರು. ಹೀಗಾಗಿ ಪ್ರತಿಯೊಂದನ್ನು ಯೋಜನಾಬದ್ಧವಾಗಿ ಮಾಡಿ, ಈ ದುರಂತಕ್ಕೆ ಕಾರಣರಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಆರೋಪಿಗಳ ಹಿನ್ನೆಲೆಯನ್ನು ಕೆದಕಿದಾಗ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರವೂ ಬಯಲಾಗಿದೆ. ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಬಂಧನ ವಿವರ ನೀಡಿದರು. ತನಿಖೆ ವೇಳೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಪ್ರಕರಣದಲ್ಲಿ ಮತ್ಯಾರ ಕೈವಾಡ ಇರಬಹುದು ಎಂಬ ಬಗ್ಗೆ ಕುರಿತು ತನಿಖೆ ಮುಂದುವರಿಯಲಿದೆ. ಈ ಕಾರಣಕ್ಕೆ ಇನ್ನು 10 ದಿನಗಳ ಕಾಲ ಮತ್ತೆ ನಮ್ಮ ವಶಕ್ಕೆ ಆರೋಪಿಗಳನ್ನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು,’’ ಎಂದು ಐಜಿಪಿ ತಿಳಿಸಿದ ಅವರು, ‘‘ತನಿಖೆ ವೇಳೆ ನಮಗೆ ಯಾವುದೇ ಒತ್ತಡ, ಯಾರ ಹಸ್ತಕ್ಷೇಪ ಇರಲಿಲ್ಲ,’’ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಎಸ್ಪಿ ಗೀತಾ ಪ್ರಸನ್ನ, ಡಿವೈಎಸ್ಪಿಗಳಾದ ಪುಟ್ಟಮಾದಯ್ಯ, ಜಯಕುಮಾರ್ ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ವಿಷ ಪ್ರಸಾದ ಉದ್ದೇಶವೇನು? ಟ್ರಸ್ಟ್‌ ಅಧ್ಯಕ್ಷ ಇಮ್ಮಡಿ ಮಹದೇವ ಸ್ವಾಮಿ ಮತ್ತು ಉಳಿದ ಟ್ರಸ್ಟ್‌ಗಳಿಗೆ ಹಿಂದಿನಿಂದಲೂ ಇದ್ದ ಭಿನ್ನಾಭಿಪ್ರಾಯ ಗೋಪುರ ನಿರ್ಮಾಣದ ವಿಷಯದಲ್ಲಿ ತಾರಕಕ್ಕೇರಿತ್ತು. ಸ್ವಾಮೀಜಿಯ 1.5 ಕೋಟಿ ಗಾತ್ರದ ಯೋಜನೆಯನ್ನು ಇತರ ಟ್ರಸ್ಟಿಗಳು ಒಪ್ಪದೆ ತಮ್ಮದೇ ಮಾದರಿಯ ಗೋಪುರ ನಿರ್ಮಾಣಕ್ಕೆ ಮುಂದಾದರು. ಡಿ. 14ರಂದು ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಾಳು ಮಾಡಿ ಟ್ರಸ್ಟಿಗಳನ್ನು ಜೈಲಿಗೆ ಕಳುಹಿಸಲು ಮತ್ತು ದೇಗುಲದ ಆಸ್ತಿಗೆ ಕನ್ನ ಹಾಕಲು ಹುಟ್ಟಿದ್ದೇ ಈ ವಿಷ ಪ್ರಸಾದ ಪ್ಲ್ಯಾನ್‌.

ಕೈ ಜೋಡಿಸಿದ ಅಂಬಿಕಾ, ಮಾದೇಶ : ಸ್ವಾಮೀಜಿಯ ಕುತಂತ್ರಕ್ಕೆ ಬಳಕೆಯಾಗಿದ್ದು ದೇವಸ್ಥಾನದ ಮ್ಯಾನೇಜರ್‌ ಮಾದೇಶನ ಪತ್ನಿ ಅಂಬಿಕಾ. ಸ್ವಾಮೀಜಿ ಮತ್ತು ಆಂಬಿಕಾ ಒಂದೇ ಊರಿನವರಾಗಿದ್ದು, ಅನೈತಿಕ ಸಂಬಂಧವೂ ಇತ್ತು. ಆಕೆಯ ಗಂಡನಿಗೆ ಮ್ಯಾನೇಜರ್‌ ಹುದ್ದೆ ಕೊಡಿಸಿದ್ದ ಸ್ವಾಮೀಜಿ ಇಬ್ಬರನ್ನೂ ದುಷ್ಟ ತಂತ್ರಕ್ಕೆ ಬಳಸಿದ್ದಾರೆ.

ಕೃಷಿ ಅಧಿಕಾರಿಯಿಂದ ಕೀಟನಾಶಕ :ವಿಷ ಪ್ರಾಶನಕ್ಕೆ ವಾರದ ಹಿಂದೆಯೇ ಪ್ಲ್ಯಾನ್‌ ಸಿದ್ಧವಾಗಿತ್ತು. ಮನೆಯ ಹೂ ಗಿಡಗಳಿಗೆ ಹಾಕಲೆಂದು ಅಂಬಿಕಾ ಕೀಟನಾಶಕ ತರಿಸಿಕೊಂಡಿದ್ದಳು. ಅಂಬಿಕಾಳ ಸಂಬಂಧಿಯೇ ಆಗಿರುವ ಕೃಷಿ ಅಧಿಕಾರಿ ಮೊನೋ

About the author

ಕನ್ನಡ ಟುಡೆ

Leave a Comment