ರಾಷ್ಟ್ರ ಸುದ್ದಿ

ವೀರ್ ಸಾವರ್ಕರ್ ಬಗ್ಗೆ ಅವಹೇಳನಕಾರಿ ಮಾತು: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು

ಮುಂಬಯಿ: ಹಿಂದುತ್ವ ರಾಯಭಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ವೀರ್‌ ಸಾವರ್ಕರ್‌ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ದೂರುದಾಖಲಿಸಲಾಗಿದೆ.
ವೀರ ಸಾವರ್ಕರ್‌ ಅವರ ಮರಿ-ಸೋದರ ಸಂಧಿ ರಂಜೀತ್‌ ಸಾವರ್ಕರ್‌ ಅವರು ಮುಂಬಯಿ ಶಿವಾಜಿ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ  ರಾಹುಲ್ ವಿರುದ್ದ ದೂರು ದಾಖಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರನಾಗಿ ಜೈಲು ಸೇರಿದ್ದ ವೀರ್‌ ಸಾವರ್ಕರ್‌ ಅವರು ಬ್ರಿಟಿಷರ ಬಳಿ ತನ್ನನ್ನು   ಜೈಲಿನಿಂದ ಬಿಡುಗಡೆ ಮಾಡುವಂತೆ ಅಂಗಲಾಚಿದ್ದರು ಮತ್ತು ತನ್ನ ಕೃತ್ಯಗಳಿಗಾಗಿ ಕ್ಷಮೆಯಾಚಿಸಿದ್ದರು ಎಂದು ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು. “ಸಾವರ್ಕರ್‌ ಅವರನ್ನು ಅವಮಾನಿಸುವ ಹೇಳಿಕೆ ನೀಡಿರುವ ಕಾರಣಕ್ಕೆ ನಾನು ರಾಹುಲ್‌ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ರಂಜೀತ್‌ ಸಾವರ್ಕರ್‌ ಸುದ್ದಿಗಾರಿಗೆ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment