ಸಿನಿ ಸಮಾಚಾರ

ವೃತ್ತಿಯೇ ನನ್ನನ್ನು ಹಿಂಬಾಲಿಸಿತು: ಸಿಂಧೂ ಲೋಕನಾಥ್

ಬೆಂಗಳೂರು: ವೈಯಕ್ತಿಕ ಜೀವನದ ವಿಷಯಗಳಿಂದ ಹಾಗೂ ಉತ್ತಮ ಚಿತ್ರ ಕಥೆಗಳು ದೊರೆಯದೇ ಇದ್ದ ಕಾರಣ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ಸಿಂಧು ಲೋಕನಾಥ್ ಅವರು “ಹೀಗೊಂದು ದಿನ” ಎಂಬ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ನಟಿ ಸಿಂಧು ಲೋಕನಾಥನ್ ಅವರು ನಟಿಸಿರುವ ಹೀಗೊಂದು ದಿನ ಚಿತ್ರವನ್ನು ವಿಕ್ರಮ ಯೋಗಾನಂತ್ ಅವರು ನಿರ್ದೇಶಿಸಿದ್ದಾರೆ. ಮಾರ್ಚ್ 30 ರಂದು ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.

ಚಿತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಂಧು ಅವರು ಚಿತ್ರವು 2016ರಲ್ಲಿಯೇ ಆರಂಭಗೊಂಡಿತ್ತು. ಆದರೆ ಬಿಡುಗಡೆ ತಡವಾಗಿದೆ. ಚಿತ್ರಕಥೆ ಈಗಲು ಹೊಸತನದಿಂದ ಕೂಡಿದೆ ಎಂದು ಹೇಳಿದ್ದಾರೆ. ಚಿತ್ರ ಕುರಿತಂತೆ ಹೇಳಿರುವ ಸಿಂಧು ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದೆ.  ನಟಿಯಾಗುವ ತನ್ನ ಕನಸಿನ ಹಿಂದೆ ಹೋಗುವ ಯುವತಿಯರ ಕುರಿತಾಗಿದೆ.

ನನ್ನ ಜೀವನದಲ್ಲಿ ಈ ರೀತಿಯಾಗಿಲ್ಲ ವೃತ್ತಿಯೇ ನನ್ನನ್ನು ಹಿಂಬಾಲಿಸಿತು. ನಾನು ಅದನ್ನು ಆಯ್ದುಕೊಳ್ಳಲಿಲ್ಲ. ಅದೇ ನನ್ನನ್ನು ಹುಡುಕಿ ಬಂದಿತ್ತು. ಹೀಗಾಗಿ ಅದನ್ನೇ ಭವಿಷ್ಯವಾಗಿ ತೆಗೆದುಕೊಂಡೆ ಎಂದು ಹೇಳಿದ್ದಾರೆ. ನಟಿಯಾಗಲು ಯುವತಿಯರು ಎಷ್ಟೆಲ್ಲಾ ಕಷ್ಟಗಳನ್ನು ಪಡುತ್ತಾರೆ. ನನ್ನ ಗುರಿಯನ್ನು ನಾನು ಮುಟ್ಟುತ್ತೇನೆಯೇ ಅಥವಾ ಇಲ್ಲವೇ ಎಂಬುದು ಚಿತ್ರ ನೋಡಿದಾಗ ತಿಳಿಯುತ್ತದೆ.  ಇದು ಕೇವಲ ಒಬ್ಬ ನಟಿಯ ಕಥೆಯಷ್ಟೇ ಅಲ್ಲ. ಭವಿಷ್ಯ ಹಾಗೂ ಮದುವೆ ಕುರಿತಂತೆ ನಿರ್ಧಾರ ಕೈಗೊಳ್ಳುವ ಪ್ರತೀಯೊಬ್ಬ ಹೆಣ್ಣುಮಕ್ಕಳ ಜೀವನದಲ್ಲಿಯೂ ಆಗುತ್ತದೆ. ಮಧ್ಯಂತರ ಸಮಯದಲ್ಲಿಯೇ ನಾವು ನಿರ್ಧಾರ ಕೈಗೊಳ್ಳುವ ಸಂದರ್ಭಗಳು ಎದುರಾಗುತ್ತವೆ ಎಂದು ತಿಳಿಸಿದ್ದಾರೆ.

ನಟಿ ಸಿಂಧೂ ಅವರಿಗೆ ವಿವಾಹವಾಗಿದ್ದು ವಿವಾಹ ಕುರಿತು ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ ಈ ಬಗ್ಗೆ ಕಾರಣ ನೀಡಿರುವ ಅವರು ವೈಯಕ್ತಿಕ ಜೀವನವನ್ನು ವೃತ್ತಿಪರ ಜೀವನದೊಂದಿಗೆ ಮಿಶ್ರಣ ಮಾಡುವುದು ನನಗಿಷ್ಟವಿಲ್ಲ. ನನ್ನ ವೈಯಕ್ತಿಯ ಜೀವನದ ಬಗ್ಗೆ ನಾನು ಯಾವಾಗಲು ಸುರಕ್ಷಿತವಾಗಿರಲು ಬಯಸುತ್ತೇನೆ. ನನ್ನ ವೃತ್ತಿ ಕುರಿತ ಕೆಲಸಗಳನ್ನು ಮನೆಗೆ ತರುವುದಿಲ್ಲ. ನನಗೆ ಎರಡು ವಿವಿಧ ರೀತಿಯ ಪ್ರಪಂಚವಿದೆ ಎಂದಿದ್ದಾರೆ.  ನನಗೆ ಇಷ್ಟವಾಗುವ ಚಿತ್ರಗಳಿಗೆ ನಾನು ಸಹಿ ಮಾಡುತ್ತೇನೆ. ಮದುವೆಯಾದ ಬಳಿಕ ಚಿತ್ರರಂಗ ಬಿಡುವ ಪ್ರಶ್ನೆ ಬರುವುದಿಲ್ಲ ಮುಂದುಯೂ ಸಿನಿಮಾಗಳಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ.

 

 

About the author

ಕನ್ನಡ ಟುಡೆ

Leave a Comment