ದೇಶ ವಿದೇಶ

ವೆಸ್ಬಡೆನ್ ಸಮ್ಮೇಳನಕ್ಕೆ ತೆರೆ

ಯುಎನ್ಎಸ್ಸಿ 1540 ನಿರ್ಣಯಗಳ ಅನುಷ್ಠಾನಕ್ಕೆ ಒತ್ತು:

ವೆಸ್ಬಡೆನ್ ಸಮ್ಮೇಳನ-2018, ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಮುಕ್ತಾಯಗೊಂಡಿದೆ. 39 ರಾಷ್ಟ್ರಗಳ ಪ್ರತಿನಿಧಿಗಳು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1,540 ಸಮಿತಿಗಳು ಹಾಗೂ ವಿಶ್ವಸಂಸ್ಥೆ ನಿಶ್ಯಸ್ತ್ರೀಕರಣ ವ್ಯವಹಾರಗಳ ವಿಭಾಗದ ತಜ್ಞರುಕೂಡ ಇದರಲ್ಲಿ ಪಾಲ್ಗೊಂಡಿದ್ದರು.ರಫ್ತುನಿಯಂತ್ರಣ ವ್ಯವಸ್ಥೆಯ ಜತೆಗೆ ಅದಕ್ಕೆ ಸಂಬಂಧಿಸಿದ ಕಾನೂನು ಹಾಗೂ ತಾಂತ್ರಿಕ ಸಹಕಾರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವಿವಿಧ ದೇಶಗಳು, ಸಂಸ್ಥೆಗಳ ಪ್ರತಿನಿಧಿಗಳಿಗೆ ಈ ಸಮ್ಮೇಳನ ವೇದಿಕೆ ಕಲ್ಪಿಸುತ್ತದೆ. ಮಾಹಿತಿ ಜತೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) 1540 ನಿರ್ಣಯಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯಯೋಜನೆ ಹಾಗೂ ಸವಾಲುಗಳ ಕುರಿತು ಕೂಡ ಮಾಹಿತಿ ವಿನಿಮಯಕ್ಕೆ ಅವಕಾಶ ನೀಡುತ್ತದೆ.

ಸಮ್ಮೇಳನದ ಧ್ಯೇಯ ವಾಕ್ಯ: ಈ ಬಾರಿಯ ಸಮ್ಮೇಳನದ ಧ್ಯೇಯವಾಕ್ಯ ‘ಯುಎನ್‌ಎಸ್‌ಸಿ 1540 ನಿರ್ಣಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ- ಕೈಗಾರಿಕೆ ಸಹಭಾಗಿತ್ವದ ಮೂಲಕ ಜಾಗತಿಕ ಪೂರೈಕೆ ಸರಪಳಿ ರೂಪಿಸುವುದು’. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜರ್ಮನಿ ಹಾಗೂ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ವ್ಯವಹಾರಗಳ ಕಾರ್ಯಾಲಯದ (ಯುಎನ್‌ಒಡಿಎ) ಸಹಭಾಗಿತ್ವದಲ್ಲಿ ಈ ಸಮ್ಮೇಳನ ಆಯೋಜಿಸಿತ್ತು. ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಈ ಕಾರ್ಯಕ್ರಮಕ್ಕೆ ಕೈಗಾರಿಕಾ ಸಹಭಾಗಿತ್ವ ಒದಗಿಸಿತ್ತು.

ಏನಿದು ವೆಸ್ಬಡೆನ್ ಕ್ರಿಯೆ?: ಇದಕ್ಕೆ ಚಾಲನೆ ನೀಡಿದ್ದು ಜರ್ಮನಿ, ಸರ್ಕಾರ-ಕೈಗಾರಿಕೆ ಸಹಭಾಗಿತ್ವದ ಮೂಲಕ ಯುಎನ್‌ಎಸ್‌ಸಿ 1540 ಅನುಷ್ಠಾನಕ್ಕೆ ಬಲನೀಡುವ ಉದ್ದೇಶದಿಂದ ಜರ್ಮನಿ ಸರ್ಕಾರ 2012ರಲ್ಲಿ ವೆಸ್ಬಡೆನ್ ಸಮ್ಮೇಳನ ಪ್ರಾರಂಭಿಸಿತು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಗಳು 1540: ಪರಮಾಣು, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳು ಹಾಗೂ ಅವುಗಳ ಪೂರೈಕೆ ವ್ಯವಸ್ಥೆಯಲ್ಲಿ ಸರ್ಕಾರೇತರ(ಖಾಸಗಿ) ಸಂಘಟನೆಗಳ ಪ್ರವೇಶ ನಿಷೇಧಿಸಲು ಎಲ್ಲ ರಾಷ್ಟಗಳು ಸಮರ್ಪಕ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಕಾನೂನಾತ್ಮಕ ನಿರ್ಬಂಧವನ್ನು ಇದು ವಿಧಿಸುತ್ತದೆ, ಸಾಮೂಹಿಕ ವಿನಾಶಕ್ಕೆ ಕಾರಣವಾಗಬಲ್ಲ ಅಪಾಯಕಾರಿ ಶಸ್ತ್ರಾಸ್ತ್ರ ಗಳು ಭಯೋತ್ಪಾದಕರು ಸೇರದಂತೆ ಸರ್ಕಾರೇತರ ಸಂಘಟನೆಗಳು ಅಥವಾ ವ್ಯಕ್ತಿಗಳ ಕೈಗೆಸಿಗದಂತೆ ಪ್ರತಿ ರಾಷ್ಟ್ರವು ಸೂಕ್ತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದಕ್ಕೆಇದು ಒತ್ತಡ ಹೇರುತ್ತದೆ.

ನಿರ್ಣಯದ 3 ಪ್ರಾಥಮಿಕ ನಿಬಂಧನೆಗಳು

  ಬೃಹತ್ಪ್ರಮಾಣದಲ್ಲಿ ಹಾನಿಯುಂಟು ಮಾಡುವ ಶಸ್ತ್ರಾಸ್ತ್ರಗಳು, ಅದಕ್ಕೆ ಸಂಬಂಧಿಸಿದ ವಸ್ತುಗಳ ಸಂಗ್ರಹಣೆ ಅಥವಾ ಪೂರೈಕೆಗೆ ಸರ್ಕಾರೇತರ ಸಂಘಟನೆಗಳಿಗೆ ಯಾವುದೇ 2 ವಿಧದ ಬೆಂಬಲವನ್ನು ನೀಡದಂತೆ ಎಲ್ಲ ರಾಷ್ಟ್ರಗಳ ಮೇಲೆ ನಿರ್ಬಂಧ, ಸರ್ಕಾರೇತರಸಂಸ್ಥೆಗಳು ಈ ಮಾದರಿಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಹಾಗೂ ಹೊಂದಿರುವುದು ಅಥವಾ ಅಂಥಪ್ರಯತ್ನಕ್ಕೆ ಆರ್ಥಿಕ ಅಥವಾ ಇನ್ಯಾವುದೇ ಮಾದರಿಯ ಸಹಕಾರ ನೀಡುವುದು ಅಪರಾಧ ಎಂದು ಪರಿಗಣಿಸುವ ಕಾನೂನನ್ನು ಎಲ್ಲ ರಾಷ್ಟ್ರಗಳು ಅಂಗೀಕರಿಸುವ ಜತೆಗೆ ಅನುಷ್ಠಾನ ಗೊಳಿಸುವುದು ಕಡ್ಡಾಯ. ಪರಮಾಣು, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳ ಮೇಲೆ ನಿಯಂತ್ರಣ ಸಾಧಿಸುವ ಕಾನೂನು ಅಳವಡಿಕೆ ಹಾಗೂ ಅನುಷ್ಠಾನಕ್ಕೆ ಪ್ರತಿರಾಷ್ಟ್ರತನ್ನದೇ ಕಾನೂನು ರೂಪಿಸಬೇಕು. ಈಅಸ್ತ್ರಗಳ ಪ್ರಸರಣೆ ತಡೆಯಲು ಅವುಗಳ ಪೂರೈಕೆ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ನಿಯಂತ್ರಣ ಸಾಧಿಸಬೇಕು.

 ಅನುಷ್ಠಾನ:

ಅಪಾಯಕಾರಿ ಅಸ್ತ್ರಗಳು ಸರ್ಕಾರೇತರ ಸಂಘಟನೆಗಳ ಕೈಗೆಸಿಗದಂತೆ ತಡೆಯಲು ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಒಪ್ಪಂದಗಳ ನಿಬಂಧನೆಗಳನ್ನು ಎಲ್ಲರಾಷ್ಟ್ರಗಳು ಅಳವಡಿಸಿಕೊಳ್ಳುವ ಜತೆಗೆ ಅನುಷ್ಠಾನಕ್ಕೆ ತರಬೇಕೆಂಬುದು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಗಳು 1540 ಉದ್ದೇಶ. ಹಾಗಂತ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಒಪ್ಪಂದಗಳಿಗೆ ಒಳಪಡದ – ರಾಷ್ಟ್ರಗಳಿಗೆ ಸಂಬಂಧಿಸಿ ಇದು ಯಾವುದೇ ನಿರ್ದಿಷ್ಟ ಕಾನೂನಾತ್ಮಕ ನಿಬಂಧನೆಗಳನ್ನು ರೂಪಿಸಿಲ್ಲ. ಇದು ಆ ರಾಷ್ಟ್ರಗಳು ಈ ಶಸ್ತ್ರಾಸ್ತ್ರಗಳ ಪ್ರಸರಣೆ ಮೇಲೆ ತಮ್ಮದೇ ಆದ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನಷ್ಟೇ ಪ್ರತಿಪಾದಿಸುತ್ತದೆ.

ಅನೇಕ ರಾಷ್ಟ್ರಗಳವಿರೋಧ:

ನಿರ್ಲಿಪ್ತ ಚಳವಳಿಯ ಭಾಗವಾಗಿರುವ ಅನೇಕ ರಾಷ್ಟ್ರಗಳು ಯುಎನ್‌ಎಸ್‌ಸಿ 1540 ನಿರ್ಣಯಗಳಿಗೆ ವಿರೋಧ ವ್ಯಕ್ತಪಡಿಸಿವೆ.

About the author

ಕನ್ನಡ ಟುಡೆ

Leave a Comment