ರಾಷ್ಟ್ರ ಸುದ್ದಿ

ವೈಮಾನಿಕ ದಾಳಿಯಲ್ಲಿ ಕಾಶ್ಮೀರದ ಉಗ್ರ ಕಾರ್ಯಾಚರಣೆ ಜೈಷ್ ಮುಖ್ಯಸ್ಥ ಹತ್ಯೆ ಸಾಧ್ಯತೆ

ಬಾಲಕೋಟ್ : ಭಾರತ ವಾಯುಸೇನೆ ಇಂದು ನಡೆಸಿದ  ಏರ್ ಸ್ಟ್ರೇಕ್  ನಲ್ಲಿ ಜೈಷ್ -ಇ- ಮೊಹಮ್ಮದ್ ಸಂಘಟನೆಯ ಉಗ್ರ , ಕಾಶ್ಮೀರದ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದ ಮುಫ್ತಿ ಅಜಾರ್ ಖಾನ್  ಮೇಲೂ ದಾಳಿ ನಡೆಸಲಾಗಿದೆ.  ಆತನು ಸಹ ಹತನಾಗಿರುವ ಸಾಧ್ಯತೆ ಇದೆ.  ಆದರೆ , ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಬಾಲಕೋಟ್ ನಲ್ಲಿ ಜೈಷ್ -ಇ- ಮೊಹಮ್ಮದ್ ಉಗ್ರರು ಅಡಗಿದ ನೆಲೆಗಳ ಚಿತ್ರಗಳು ಲಭ್ಯವಾಗಿದ್ದು, ಭಾರತೀಯ ವಾಯುಸೇನೆ ಧ್ವಂಸಗೊಳಿಸಿರುವ ಉಗ್ರರ ನೆಲೆಗಳ ಮೆಟ್ಟಿಲುಗಳ ಮೇಲೆ ಅಮೆರಿಕಾ, ಇಂಗ್ಲೆಂಡ್ ಹಾಗೂ ಇಸ್ರೇಲ್  ರಾಷ್ಟ್ರಗಳ ರಾಷ್ಟ್ರ ಧ್ವಜದ  ಚಿತ್ರ ಕಂಡುಬಂದಿದೆ.

ಬಾಲಕೋಟ್ ನಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿದ್ದ ಕಟ್ಟಡದ ಗೇಟಿನ ಚಿತ್ರ ಕೂಡಾ ಲಭ್ಯವಾಗಿದೆ.  ಇಲ್ಲಿ 325 ಉಗ್ರರು ಹಾಗೂ 25 ರಿಂದ 27 ಮಂದಿ ತರಬೇತುದಾರರು ಇದ್ದರು ಎಂಬುದು ತಿಳಿದುಬಂದಿದೆ.

 

 

About the author

ಕನ್ನಡ ಟುಡೆ

Leave a Comment