ರಾಜ್ಯ ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಹೇಳಿದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಕ್ಕು‌ ಮೊಟಕುಗೊಂಡಾಗ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಈ ದೇಶದ ಸಂವಿಧಾನ ಶ್ರೇಷ್ಠ, ಸಂವಿಧಾನ ಹೇಳಿದ ಹಾಗೇ‌ ನಾವು ನಡೆದುಕೊಳ್ಳಬೇಕು. ಈ ವಿಚಾರವಾಗಿ ನಾನು ರಾಜಕೀಯ ಮಾಡಲ್ಲ. ಯಾವುದು ಸಮಾಜಕ್ಕೆ ಒಳ್ಳೆಯದಾಗಲ್ಲವೋ ಅದನ್ನು ತಿರಸ್ಕರಿಸುವುದನ್ನು ಕಲಿಯಬೇಕು ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಚಿವ ಡಿಕೆಶಿ ಕ್ಷಮೆಯಾಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಆ ಸರ್ಕಾರದಲ್ಲಿರಲಿಲ್ಲ. ಅದು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಧಾರ್ಮಿಕ ವಿಚಾರ ಮಾತನಾಡಲು ನಾನು ಹೋಗಲಾರೆ. ಚುನಾವಣೆಗೆ ಹೋಗುವಾಗ ಇವೆಲ್ಲ ಮಾತುಗಳ ಅಗತ್ಯವಿಲ್ಲ. ನಾವು ಪಕ್ಷದ ಪ್ರಣಾಳಿಕೆ ಮೇಲೆ ಮತ ಕೇಳುತ್ತೇವೆ.‌ ಧರ್ಮದ ಬಗ್ಗೆ ಬೇಕಾದರೆ ಧಾರ್ಮಿಕ ಸಂವಾದಕ್ಕೆ ಕರೆಯಲಿ ಬಂದು ಮಾತನಾಡುವೆ ಎಂದು ಹೇಳಿದ್ದಾರೆ.

ಅಮೃತಸರ ರೈಲು ದುರಂತ ಸಮಗ್ರ ತನಿಖೆಯಾಗಲಿ: ರೈಲ್ವೆ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಘಟನೆ ಕುರಿತು ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈಲ್ವೆ ಹಳಿ ಪಕ್ಕ ಸಾರ್ವಜನಿಕ ಕಾರ್ಯಕ್ರಮ ಮಾಡುವಾಗ ಇಲಾಖೆ ಎಚ್ಚರಿಕೆ ವಹಿಸಿಬೇಕಿತ್ತು. ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಾರ್ಯಕ್ರಮ ಮಾಡಿದ್ದು ರೈಲ್ವೆ ಇಲಾಖೆ ಹಾಗೂ ರೈಲ್ವೆ ಪೊಲೀಸರ ತಪ್ಪು. ಮಳೆಗಾಲ, ಚಳಿಗಾಲ, ಮಂಜು ಬಿದ್ದಾಗ, ಕರ್ವಿಂಗ್ ಇದ್ದಾಗ ರೈಲು ನಿಧಾನದ ಬಗ್ಗೆ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

About the author

ಕನ್ನಡ ಟುಡೆ

Leave a Comment